Darshan: ಕುರಿ ಕಾಯುವ ಹುಡುಗನಿಗೆ ಆನ್ ಸ್ಪಾಟ್ 50 ಲಕ್ಷ ಪರಿಹಾರ ಕೊಡಿಸಿದ ಡಿಬಾಸ್! ಇದು ದೊಡ್ಡ ಗುಣ ಅಂದ್ರೆ

0 1

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಹಾಗೆಯೇ ಜನರಿಗೂ ಸಹಾಯ ಮಾಡುತ್ತಾರೆ. ಸಹಾಯ ಕೇಳಿಕೊಂಡು ಮನೆಯ ಹತ್ತಿರ ಹೋದವರಿಗೆ ಡಿಬಾಸ್ ದರ್ಶನ್ ಅವರು ಸಹಾಯ ಮಾಡದೆ ವಾಪಸ್ ಕಳಿಸಿದ್ದೇ ಇಲ್ಲ. ಇತ್ತೀಚೆಗೆ ಶೂಟಿಂಗ್ ವೇಳೆ ಹಳ್ಳಿಯಲ್ಲಿ ಕುರಿ ಕಾಯುವ ಹುಡುಗನಿಗೆ ಡಿಬಾಸ್ ಅವರು ಸ್ಥಳದಲ್ಲೇ 50,000 ಪರಿಹಾರ ಸಿಗುವ ಹಾಗೆ ಮಾಡಿರುವ ಘಟನೆ ಇದೀಗ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಕಾಟೇರಾ ಸಿನಿಮಾ ಚಿತ್ರೀಕರಣದ ವೇಳೆ.

ಈ ಘಟನೆಯ ಬಗ್ಗೆ ನಟ ಕುಮಾರ್ ಗೋವಿಂದ್ ಅವರು ಇಂಟರ್ವ್ಯೂ ಒಂದರಲ್ಲಿ ತಿಳಿಸಿದ್ದಾರೆ. ಕಾಟೇರಾ ಸಿನಿಮಾದ ಕೊನೆಯ ಶೆಡ್ಯೂಲ್ ಚಿತ್ರೀಕರಣದ ವೇಳೆ ಶೂಟಿಂಗ್ ನಡೆಯುತ್ತಿದ್ದ ಸ್ಥಳದ ಹತ್ತಿರ ಸುಮಾರು 250 ಕುರಿಗಳನ್ನು ಮೇಯಿಸಿಕೊಂಡು ಒಬ್ಬ ಹುಡುಗ ಬಂದಾಗ, ಅವನ ಜೊತೆಗೆ ಸಹಜವಾಗಿ ಮಾತನಾಡಿದ ಡಿಬಾಸ್ ದರ್ಶನ್ ಅವರು, ಇಷ್ಟೆಲ್ಲಾ ಕುರಿಗಳನ್ನು ಇಟ್ಟುಕೊಂಡಿರೋದಕ್ಕೆ ಸರ್ಕಾರದಿಂದ ಸಿಗೋ ಎಲ್ಲವನ್ನ ಪಡೆದುಕೊಂಡಿದ್ಯಾ ಎಂದು ಕೇಳಿದರಂತೆ.

ಆಗ ಆ ಹುಡುಗ ಇಲ್ಲ ಅಣ್ಣ, ನನಗೆ ಏನು ಗೊತ್ತಿಲ್ಲ ಎಂದು ಹೇಳಿದ್ದಾನೆ. ಆಗ ದರ್ಶನ ಅವರು ಇಷ್ಟು ಕುರಿ ಇಟ್ಟುಕೊಂಡು ಮೇಯಿಸುತ್ತಿರೋದಕ್ಕೆ ಸರ್ಕಾರದಿಂದ ಕಡಿಮೆ ಅಂದ್ರು 50 ಲಕ್ಷ ಬರಬೇಕು ಎಂದು ಹೇಳಿ ಶೂಟಿಂಗ್ ಗೆ ಸ್ವಲ್ಪ ತಡವಾದರು ಪರವಾಗಿಲ್ಲ ಎಂದು ತಕ್ಷಣವೇ ತಮ್ಮ ಫ್ರೆಂಡ್ ಕರೆದು, ಆ ಹುಡುಗನ ಫೋನ್ ನಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಲು ಹೆಲ್ಪ್ ಮಾಡಿದ್ರಂತೆ. ಹಾಗೆಯೇ ಊರಲ್ಲಿ ವೆಟರ್ನರಿ ಡಾಕ್ಟರ್ ಇರ್ತಾರೆ ಅವರ ಹತ್ತಿರ ಕೇಳು ಪೂರ್ತಿ ಮಾಹಿತಿ ಕೊಡ್ತಾರೆ ಎಂದು ಹೇಳಿದರಂತೆ.

ಕುರಿ ಕಾಯೋ ಹುಡುಗನಿಗೆ 50 ಲಕ್ಷ ಪರಿಹಾರ ಸಿಗುತ್ತೆ ಅಂದ್ರೆ ಆ ಹುಡುಗನ ಮನಸ್ಥಿತಿ ಹೇಗೆ ಅನ್ನಿಸಿರಬೇಡ…ನಮ್ಮ ಡಿಬಾಸ್ ದರ್ಶನ್ ಅವರು ಸ್ಥಳದಲ್ಲೇ ಅವನಿಗೆ ಪರಿಹಾರ ಸಿಗುವ ಹಾಗೆ ಮಾಡಿದ್ದಾರೆ. ದರ್ಶನ್ ಅವರ ಈ ಗುಣದಿಂದಲೇ ಎಲ್ಲರಿಗು ಅವರು ಇಷ್ಟ ಆಗೋದು.. ಅಭಿಮಾನಿಗಳಿಗೆ ಇನ್ನು ಹತ್ತಿರ ಆಗಿದ್ದಾರೆ ಡಿಬಾಸ್.

Leave A Reply

Your email address will not be published.