Yash: ಟಾಕ್ಸಿಕ್ ಸಿನಿಮಾ ಮೂಲಕ ನಿರ್ಮಾಪಕರಾದ ಯಶ್! ಹೂಡಿಕೆ ಮಾಡ್ತಿರೋದು ಎಷ್ಟು ಕೋಟಿ ಗೊತ್ತಾ?

0 1

Yash: ರಾಕಿ ಭಾಯ್ ಯಶ್ ಅವರ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದಿದೆ. ಇಂದು ಬೆಳಗ್ಗೆ ಯಶ್19 ಟೈಟಲ್ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಬಗೆಯ ಸಿನಿಮಾ ಆಗಿದ್ದು, ಫಸ್ಟ್ ಲುಕ್ ನಲ್ಲಿಯೇ ಅಭಿಮಾನಿಗಳ ಗಮನ ಸೆಳೆದಿದೆ. ಆದರೂ ಅದೊಂದು ವಿಚಾರಕ್ಕೆ ಯಶ್ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ..

ಯಶ್ ಅವರ ಹೊಸ ಸಿನಿಮಾ ಹೆಸರು ಟಾಕ್ಸಿಕ್, ಈ ಸಿನಿಮಾದ ಟೈಟಲ್ ಲಾಂಚ್ ಇಂದು ಆಗಿದ್ದು, ಯಶ್ ಅವರು ಖುದ್ದಾಗಿ ವಿಡಿಯೋ ಶೇರ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಪ್ರೊಡ್ಯುಸ್ ಮಾಡುತ್ತಿದೆ. ಇನ್ನು ಬಹುನಿರೀಕ್ಷಿತ ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ಸಾಯಿಪಲ್ಲವಿ ಅವರು ನಾಯಕಿ ಎಂದು ಹೇಳಲಾಗುತ್ತಿದೆ.

ಅವರೊಡನೆ ಇನ್ನು ಇಬ್ಬರು ನಾಯಕಿಯರು ಸಿನಿಮಾದಲ್ಲಿ ಇರಲಿದ್ದಾರಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಿನಿಮಾದ ಈ ಫಸ್ಟ್ ಲುಕ್ ನೋಡಿದರೆ Fantasy Drama ರೀತಿಯಲ್ಲಿ ಇದ್ದು ಬಹಳ ಆಕರ್ಷಕವಾಗಿದೆ. ಈ ಸಿನಿಮಾಗೆ ಯಶ್ ಅವರು ನಟ, ಹೀರೋ ಮಾತ್ರವಲ್ಲ ಸಿನಿಮಾದ ನಿರ್ಮಾಪಕರಲ್ಲಿ ಕೂಡ ಯಶ್ ಅವರು ಒಬ್ಬರು. ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಅವರೊಡನೆ ಯಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ತಮ್ಮ Monster Minds ಸಂಸ್ಥೆಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಸಿನಿಮಾದಲ್ಲಿ ಯಶ್ ಅವರದ್ದು 50% ಶೇರ್ ಇದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಸಿನಿಮಾ ಬರೀ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಕೆಜಿಎಫ್2 ಗಿಂತ ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ. ಸಿನಿಮಾದ ಬಜೆಟ್ ಕೂಡ ಅಷ್ಟೇ ದುಬಾರಿ ಆಗಿರಲಿದ್ದು, ಬರೋಬ್ಬರಿ 170 ಕೋಟಿ ಬಜೆಟ್ ನಲ್ಲಿ ಸಿನಿಮ ತಯಾರಾಗಲಿದೆಯಂತೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ನವೆಂಬರ್ ನಲ್ಲೇ ಟಾಕ್ಸಿಕ್ ಸಿನಿಮಾ ಶೂಟಿಂಗ್ ಲಂಡನ್ ನಲ್ಲಿ ಶುರು ವಾಗಿದೆಯಂತೆ. ಆದರೆ ಚಿತ್ರತಂಡ ಆ ವಿಚಾರವನ್ನು ಬಿಟ್ಟುಕೊಟ್ಟಿಲ್ಲ. ಇದರಲ್ಲಿ ಕೂಡ ಬಿಗ್ ಸರ್ಪ್ರೈಸ್ ಇದ್ದು, ಯಶ್ ಅವರ ಹುಟ್ಟುಹಬ್ಬಕ್ಕೆ ರಿವೀಲ್ ಅಗಲಿದೆಯಂತೆ.

Leave A Reply

Your email address will not be published.