Yash19: ಯಶ್ ಅವರ ಮುಂದಿನ ಸಿನಿಮಾಗೆ ಹೀರೋಯಿನ್ ಫಿಕ್ಸ್!ಇವರೇ ನೋಡಿ ಲಕ್ಕಿ ಲೇಡಿ!

Written by Pooja Siddaraj

Published on:

Yash19: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಆದರೆ ಯಶ್ ಅವರು ಕೆಜಿಎಫ್2 ಬಳಿಕ ಹೊಸ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಸಹ ಇಲ್ಲಿಯವರೆಗೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇನ್ನು ಸಿಕ್ಕಿಲ್ಲ. ಮುಂದಿನ ಸಿನಿಮಾ ಘೋಷಣೆ ಆಗ ಈಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗೂ ಕನ್ನಡದಲ್ಲಿ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

ಮುಂದಿನ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಯಶ್ ಅವರು ಬಹಳ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಫ್ಯಾಮಿಲಿ ಜೊತೆಯಲ್ಲಿ ಕೂಡ ಸಮಯ ಕಳೆಯುತ್ತಿದ್ದಾರೆ. ಕೊನೆಗೂ ಇಷ್ಟು ದಿನಗಳ ಕಾಲ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಹತ್ತಿರಕ್ಕೆ ಬರುತ್ತಿದೆ. ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಕೊನೆಗೂ ಅಪ್ಡೇಟ್ ಸಿಕ್ಕಿದೆ.

ಯಶ್19 ಸಿನಿಮಾದ ಟೈಟಲ್ ಅನೌಸ್ಮೆಂಟ್ ಡಿಸೆಂಬರ್ 8ರಂದು ಬೆಳಗ್ಗೆ 9:55ಕ್ಕೆ ನಡೆಯಲಿದೆ ಎಂದು ಯಶ್ ಅವರೇ ತಿಳಿಸಿದ್ದಾರೆ. ಅದರ ಜೊತೆಗೆ ಸಿನಿಮಾದಲ್ಲಿ ಯಶ್ ಅವರಿಗೆ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಯಶ್ ಅವರ ಮುಂದಿನ ಸಿನಿಮಾಗೆ ಬಹುಭಾಷಾ ನಟಿ ಸಾಯಿಪಲ್ಲವಿ ಅವರು ನಾಯಕಿ ಎನ್ನುವ ಸುದ್ದಿ ಈಗ ಭಾರಿ ಸೌಂಡ್ ಮಾಡುತ್ತಿದೆ.

ಸಾಯಿಪಲ್ಲವಿ ಸಿನಿಮಾ ಸೈನ್ ಮಾಡಿದ್ದಾರೆ ಎನ್ನಲಾಗಿದ್ದು, ಮಲಯಾಳಂ ನಲ್ಲಿ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಸಿನಿಮಾ ನಿರ್ದೇಶನ ಮಾಡಿರುವ ಗೀತು ಮೋಹನ್ ದಾಸ್ ಅವರು ಈ ಸಿನಿಮಾ ನಿರ್ದೇಶಕಿ ಎಂದು ಹೇಳಲಾಗುತ್ತಿದೆ. ಈ ಸುದ್ದಿಗಳು ಏನೇ ಇದ್ದರೂ ಕೂಡ, ಡಿಸೆಂಬರ್ 8ರಂದು ಅಸಲಿ ವಿಚಾರ ಗೊತ್ತಾಗಲಿದೆ.

Leave a Comment