Chanakya Neeti: ರಾಜತಂತ್ರ ಮತ್ತು ತತ್ವಜ್ಞಾನಿ ಆಗಿ ಖ್ಯಾತಿ ಪಡೆದಿರುವುದು ಆಚಾರ್ಯ ಚಾಣಕ್ಯರು. ಶತಮಾನದ ಹಿಂದೆ ಇವರು ರಚಿಸಿರುವ ಚಾಣಕ್ಯನೀತಿಯಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಏನು ಬೇಕೋ ಅದೆಲ್ಲವನ್ನು ತಿಳಿಸಿದ್ದಾರೆ. ಚಾಣಕ್ಯನೀತಿಯಲ್ಲಿ ತಿಳಿಸಿರುವ ನೀತಿಯನ್ನು ತಿಳಿದು, ಬದುಕಿನಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ತಾವು ರಚಿಸಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಚಾಣಕ್ಯರು ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳಲ್ಲಿ ಒಬ್ಬ ಮನುಷ್ಯ ತನ್ನ ಸಂಬಂಧದಲ್ಲಿ ಹೇಗಿರಬೇಕು, ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ಕೂಡ ತಿಳಿಸಲಾಗಿದೆ. ಚಾಣಕ್ಯರು ಪುರುಷರಿಗಿಂತ ಮಹಿಳೆಯರಲ್ಲಿ ಜಾಸ್ತಿ ಇರುವ ಆಸೆಗಳ ಬಗ್ಗೆ ಕೂಡ ತಿಳಿಸಿದ್ದು, ಆಚಾರ್ಯ ಚಾಣಕ್ಯರು ಹೇಳಿರೋದೇನು ಎಂದು ತಿಳಿಸುತ್ತೇವೆ ನೋಡಿ..
ಸ್ತ್ರೀನಾಂ ದ್ವಿಗುಣ ಆಹಾರೋ ಚಾಪಿ ಚತುರ್ಗುಣ
ಸಾಹಸಂ ಷಡ್ಗುಣಂ ಕಾಮಶ್ಚಾಷ್ಠಗುಣಃ ಸ್ಮೃತಃ
ಮಹಿಳೆಯರ ಬಗ್ಗೆ ಆಚಾರ್ಯ ಚಾಣಕ್ಯರು ಬರೆದಿರುವ ಶ್ಲೋಕ ಇದು. ಇದರ ಅರ್ಥದಲ್ಲಿ, ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವು ಮಹಿಳೆಯರಲ್ಲಿ ಇರುತ್ತದೆ. ಹಾಗೆಯೇ ಪುರುಷರಿಗಿಂತ 4 ಪಟ್ಟು ನಾಚಿಕೆ ಜಾಸ್ತಿ ಇರುತ್ತದೆ. ಕಾಮದ ಭಾವನೆ ಪುರುಷರಿಗಿಂತ 8 ಪಟ್ಟು ಜಾಸ್ತಿ ಇರುತ್ತದೆ.
ಸಹನೆ ಮತ್ತು ನಾಚಿಕೆ ಪುರುಷರಿಗಿಂತ ಜಾಸ್ತಿ ಇರುತ್ತದೆ. ಮಹಿಳೆಯರು ಯಾವತ್ತಿಗೂ ತಮ್ಮ ಆಸೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
“ಮೂರ್ಖಶಿಷ್ಯೋಪದೇಶೇನ್ ದುಷ್ಟಸ್ತ್ರೀಭರಣೇನ್ ಚ.
ದುಃಖಿತೈ: ಸಮ್ಪ್ರಯೋಗೆಣ ಪಂಡಿತೋ-ಪ್ಯನ್ವಸಿದತಿ.” ಇದು ಆಚಾರ್ಯ ಚಾಣಕ್ಯರ ಮತ್ತೊಂದು ಶ್ಲೋಕ ಆಗಿದೆ. ಒಂದು ವೇಳೆ ನಿಮ್ಮ ಶಿಷ್ಯ ಮೂರ್ಖ ಆಗಿದ್ದರೆ ಅವನಿಗೆ ಪಾಠ ಮಾಡುವುದು ವ್ಯರ್ಥ.
ಹೆಣ್ಣು ಕೆಟ್ಟವಳಾದರೆ ಅವಳನ್ನು ನೋಡಿಕೊಳ್ಳುವುದು ವ್ಯರ್ಥ, ತೃಪ್ತಿ ಇಲ್ಲದ ವ್ಯಕ್ತಿಯ ಜೊತೆಗೆ ನಿಮಗೆ ಪ್ರೀತಿ ಇದ್ದರೆ, ನಿಮ್ಮ ಹಣ ವ್ಯರ್ಥವಾದರೆ ನಿಮ್ಮಲ್ಲಿ ಎಷ್ಟೇ ಬುದ್ಧಿವಂತಿಕೆ ಇದ್ದರೂ ನೀವು ಕಷ್ಟಪಡಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಈ ಮಾತುಗಳನ್ನು ಪಾಲಿಸಿ ನಾವು ಬದುಕಲ್ಲಿ ಮುಂದಿನ ಹೆಜ್ಜೆ ಇಟ್ಟರೆ, ಬದುಕು ಸುಲಭವಾಗುತ್ತದೆ.