Dhruva Sarja: ವೇದಿಕೆಗೆ ಡಿಬಾಸ್ ದರ್ಶನ್ ಬಂದರು ಧ್ರುವ ಸರ್ಜಾ ಮಾತನಾಡಿರಲಿಲ್ಲ, ಅಭಿಮಾನಿಗಳ ಆಕ್ರೋಶಕ್ಕೆ ಈಗ ಉತ್ತರ ಸಿಕ್ಕಿದೆ.

Written by Pooja Siddaraj

Published on:

ಚಂದನವನದಲ್ಲಿ ಖ್ಯಾತ ನಟರ ಸಾಲಿಗೆ ಸೇರುವವರು ನಟ ಧ್ರುವ ಸರ್ಜಾ ಮತ್ತು ನಟ ದರ್ಶನ್. ಇವರಿಬ್ಬರಿಗೂ ಅವರದ್ದೇ ಆದ ದೊಡ್ಡ ಮಟ್ಟದ ಫ್ಯಾನ್ ಬೇಸ್ ಇದೆ. ಆದರೆ ಈ ಇಬ್ಬರು ನಟರ ನಡುವೆ ಇತ್ತೀಚೆಗೆ ನಡೆದ ಘಟನೆಯೊಂದು ಇಬ್ಬರ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾ ವಾರ್ ನಡೆಯುವ ಹಾಗೆ ಮಾಡಿತ್ತು. ದರ್ಶನ್ ಅವರ ಎದುರು ಧ್ರುವ ಯಾಕೆ ಹಾಗೆ ನಡೆದುಕೊಂಡರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಉಳಿದಿತ್ತು, ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಈ ಘಟನೆ ನಡೆದದ್ದು ಸೆಪ್ಟೆಂಬರ್ 29ರಂದು, ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರವಾಗಿ ಹೋರಾಟ ನಡೆಯುತ್ತಿದೆ. ಕರ್ನಾಟಕದಲ್ಲೇ ನೀರಿನ ಅಭಾವ ಇರುವಾಗ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು ಎನ್ನುವ ವಿಷಯಕ್ಕೆ ಹೋರಾಟ ನಡೆಯುತ್ತಿದ್ದು, ಇದಕ್ಕಾಗಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಇದ್ದ ದಿನ ಚಂದನವನದ ಕಲಾವಿದರು ಕೂಡ ಈ ಹೋರಾಟದಲ್ಲಿ ಪಾಲ್ಗೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರು ಪ್ರತಿಭಟನೆ ನಡೆಯಿತು.

ಶಿವಣ್ಣ ಅವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಚಂದನವನದ ಬಹಳಷ್ಟು ಕಲಾವಿದರು ಭಾಗಿಯಾಗಿದ್ದರು. ನಟ ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್, ಹಂಸಲೇಖ, ರಘು ಮುಖರ್ಜಿ, ನಟಿಯರಾದ ಗಿರಿಜಾ ಲೋಕೇಶ್, ಶ್ರುತಿ, ಅನು ಪ್ರಭಾಕರ್, ಪೂಜಾ ಗಾಂಧಿ ಸೇರಿದಂತೆ ಎಲ್ಲಾ ಕಲಾವಿದರು ಹೋರಾಟದಲ್ಲಿ ಭಾಗವಹಿಸಿ, ಕರ್ನಾಟಕ ಸರ್ಕಾರ ನಮ್ಮ ರಾಜ್ಯದ ರೈತರಿಗೆ ಪ್ರಾಮುಖ್ಯತೆ ಕೊಡಬೇಕು ಎಂದು ಮಾತನಾಡಿದರು.

ಈ ಹೋರಾಟದ ನಡೆದ ಅದೊಂದು ಘಟನೆ ನಟ ದರ್ಶನ್ ಮತ್ತು ನಟ ಧ್ರುವ ಸರ್ಜಾ ಅವರ ಅಭಿಮಾನಿಗಳ ನಡುವೆ ವಾರ್ ನಡೆಯುವ ಹಾಗೆ ಮಾಡಿತು. ಅಷ್ಟಕ್ಕೂ ನಡೆದಿದ್ದೇನು ಎಂದರೆ, ಅಂದು ಹೋರಾಟಕ್ಕೆ ನಟ ದರ್ಶನ್ ಅವರು ಬಂದಾಗ, ವೇದಿಕೆಯಲ್ಲಿದ್ದ ಶಿವಣ್ಣ ಮತ್ತು ಇನ್ನೆಲ್ಲರು ಕೂಡ ಎದ್ದು ನಿಂತರು, ದರ್ಶನ್ ಅವರು ಶಿವಣ್ಣ ಅವರ ಕಾಲಿಗೆ ನಮಸ್ಕಾರ ಮಾಡಿದರು. ಆದರೆ ಶಿವಣ್ಣ ಅವರ ಪಕ್ಕದಲ್ಲೇ ಇದ್ದ ನಟ ಧ್ರುವ ಸರ್ಜಾ ದರ್ಶನ್ ಅವರು ಬಂದಾಗ ಎದ್ದು ನಿಲ್ಲಲಿಲ್ಲ, ಕುಳಿತೇ ಇದ್ದರು.

ದರ್ಶನ್ ಅವರು ಮಾತು ಮುಗಿಸಿ ಬಂದಾಗ ಕೂಡ ಧ್ರುವ ಸರ್ಜಾ ಅವರು ಒಂದು ಸಾರಿಯು ನಗಲಿಲ್ಲ ಅಥವಾ ಮಾತನಾಡಿಸಲಿಲ್ಲ, ಎದ್ದು ಹೊರಟೆ ಬಿಟ್ಟರು. ಧ್ರುವ ಅವರ ವರ್ತನೆ ಯಾಕೆ ಈ ರೀತಿಯಿತ್ತು ಎನ್ನುವುದಕ್ಕೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಇಬ್ಬರ ಅಭಿಮಾನಿಗಳ ನಡುವೆ ಕೂಡ ಜಗಳ ನಡೆಯಿತು. ಆದರೆ ಅಂದು ಧ್ರುವ ಅವರು ಆ ರೀತಿ ನಡೆದುಕೊಂಡಿದ್ದು ಯಾಕೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ..

ಚಿರಂಜೀವಿ ಸರ್ಜಾ ಅವರು ಅಭಿನಯಿಸಿರುವ ರಾಜ ಮಾರ್ತಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಟ್ರೈಲರ್ ರಿಲೀಸ್ ಇವೆಂಟ್ ನಡೆಯಿತು, ಆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಒಳ್ಳೆ ಹುಡುಗ ಪ್ರಥಮ್, ಧ್ರುವ ಅವರು ಯಾಕೆ ಹಾಗೆ ನಡೆದುಕೊಂಡರು ಎನ್ನುವುದನ್ನು ತಿಳಿಸಿದ್ದಾರೆ. ಅಸಲಿ ವಿಚಾರ ಏನು ಎಂದರೆ, ಬಂದ್ ನಡೆದ ಹಿಂದಿನ ದಿನ ಧ್ರುವ ಸರ್ಜಾ ಅವರ ಅಭಿಮಾನಿ ರಘುನಾಥ್ ಭಜಂತ್ರಿ ವಿಧಿವಶರಾದರು. 28ರ ರಾತ್ರಿ ಹಾಸನದ ರೂಟ್ ನಲ್ಲಿ ಬೇಗೂರಿಗೆ ಬರುವಾಗ ಸರ್ಕಾರಿ ಬಸ್ ಮತ್ತು ಕಾರ್ ನಡುವೆ ಆಕ್ಸಿಡೆಂಟ್ ಆಗಿದೆ.

ಅದರಲ್ಲಿ ರಘುನಾಥ್ ತೀರಿಹೋಗಿದ್ದಾರೆ. ಆತನದ್ದು ಬಡ ಕುಟುಂಬ, ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಮನೆಯವರನ್ನು ನೋಡಿಕೊಳ್ಳುತ್ತಿದ್ದ. ಧ್ರುವ ಸರ್ಜಾ ಅವರ ಅಭಿಮಾನಿಯಾಗಿದ್ದ ರಘುನಾಥ್, ಧ್ರುವ ಅವರೊಡನೆ ಒಂದು ಸಿನಿಮಾ ಮಾಡಬೇಕು, ಆ ಸಿನಿಮಾವನ್ನು ತಾವು ನಿರ್ದೇಶನ ಮಾಡಬೇಕು ಎಂದು ಕೂಡ ಆಸೆ ಪಟ್ಟಿದ್ದರು. ರಾಜಮಾರ್ತಾಂಡ ಸಿನಿಮಾಗೆ ಧ್ರುವ ಸರ್ಜಾ ಅವರು ಡಬ್ ಮಾಡಬೇಕಾದ ದಿನ ಅವರೊಡನೆ ಭೇಟಿ ಆಗಬೇಕಿತ್ತು.

ಆದರೆ ಆಫೀಸ್ ಇಂದ ಬರುವುದರೊಳಗೆ ಧ್ರುವ ಅವರ ಡಬ್ಬಿಂಗ್ ಮುಗಿದಿದ್ದ ಕಾರಣ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ಈ ದುರ್ಘಟನೆ ನಡೆದು ಹೋಗಿದೆ. ಧ್ರುವ ಸರ್ಜಾ ಅವರಿಗೆ ಪ್ರಥಮ್ ಅವರು ಫೋನ್ ಮಾಡಿದಾಗ, ಹುಟ್ಟುಹಬ್ಬದ ದಿನ ಅವರನ್ನು ಕರೆದುಕೊಂಡು ಬರಲು ಹೇಳಿದರಂತೆ ಧ್ರುವ ಸರ್ಜಾ, ಆದರೆ ಆತ ಇನ್ನಿಲ್ಲ ಎಂದು ಪ್ರಥಮ್ ಅವರು ಹೇಳಿದಾಗ ತುಂಬಾ ನೊಂದುಕೊಂಡರಂತೆ.

ಮೂರು ದಿನಗಳಿಂದ ಧ್ರುವ ಸರ್ಜಾ ಅವರು ಈ ವಿಚಾರವಾಗಿ ನೋವು ಅನುಭವಿಸುತ್ತಿದ್ದು, ತುಂಬಾ ಡಿಪ್ರೆಸ್ ಆಗಿದ್ದಾರಂತೆ. ಇದೇ ಕಾರಣಕ್ಕೆ ಬಂದ್ ದಿವಸ ಕೂಡ ಧ್ರುವ ಅವರ ಮೊಗದಲ್ಲಿ ನಗು ಅಥವಾ ಚೈತನ್ಯ ಇರಲಿಲ್ಲ, ಆದರೆ ಜನರು ತಮಗೆ ಬೇಕಾದ ಹಾಗೆ ಮಾತನಾಡುತ್ತಾರೆ ಎಂದು ಅಸಲಿ ವಿಚಾರ ಏನು ಎನ್ನುವುದನ್ನು ಪ್ರಥಮ್ ತಿಳಿಸಿದ್ದಾರೆ.

Leave a Comment