Gattimela: ಶೀಘ್ರದಲ್ಲೇ ಅಂತ್ಯವಾಗಲಿದೆ ಗಟ್ಟಿಮೇಳ ಧಾರವಾಹಿ! ಅಭಿಮಾನಿಗಳಿಗೆ ಬೇಸರ!

0 24

Gattimela: ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಮನರಂಜನೆ ಕೊಡುವ ವಾಹಿನಿ ಎಂದರೆ ಜೀಕನ್ನಡ ಎಂದು ಹೇಳಬಹುದು. ಕರ್ನಾಟಕದ ನಂಬರ್1 ಚಾನೆಲ್ ಆಗಿದೆ ಜೀ. ಈ ವಾಹಿನಿಯಲ್ಲಿ ಸಾಕಷ್ಟು ಶೋಗಳು ಧಾರವಾಹಿಗಳು ಬರುತ್ತಿವೆ. ಆದರೆ ಮೂರ್ನಾಲ್ಕು ವರ್ಷಗಳ ಹಿಂದೆ ಶುರುವಾದ ಗಟ್ಟಿಮೇಳ ಧಾರವಾಹಿ ಕ್ರೇಜ್ ಬೇರೆಯದೇ ರೀತಿ ಇತ್ತು ಎಂದರೆ ತಪ್ಪಲ್ಲ..

ಈ ಧಾರವಾಹಿ ಟಿಆರ್ಟಿ ರೇಟಿಂಗ್ ನಲ್ಲಿ ನಂಬರ್1 ಸ್ಥಾನಕ್ಕೆ ಏರಿದ್ದ ಧಾರವಾಹಿ, ಹೀರೋ ವೇದಾಂತ್ ಹಾಗೂ ಹೀರೋಯಿನ್ ಅಮೂಲ್ಯ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಈಗಲೂ ಇವರಿಬ್ಬರ ಮೇಲಿನ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಗಟ್ಟಿಮೇಳ ಧಾರವಾಹಿ ಒಂದು ರೀತಿ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿ ಜೊತೆಗೆ ಥ್ರಿಲ್ಲಿಂಗ್ ಎಲಿಮೆಂಟ್ಸ್ ಗಳನ್ನು ಕೂಡ ಒಳಗೊಂಡಿತ್ತು. ಈಗ ಈ ಧಾರವಾಹಿ ಮುಕ್ತಾಯ ಹಂತಕ್ಕೆ ತಲುಪಿದೆ.

ಹೌದು, ಗಟ್ಟಿಮೇಳ ಧಾರಾವಾಹಿಯಲ್ಲಿ ಕಳೆದ ಮೂರು ತಿಂಗಳಿನಿಂದ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ರಕ್ಷ್ ಅವರು ಕಾಣಿಸುತ್ತಿಲ್ಲ. ನಾಯಕನೆ ಇಲ್ಲದೇ ಧಾರವಾಹಿ ನಡೆಯುತ್ತಿದೆ. ಕಥೆ ಕೂಡ ಜನರಿಗೆ ಹಿಡಿಸುವಂತೆ ಇರಲಿಲ್ಲ. ಇದೆಲ್ಲವನ್ನು ಬಿಟ್ಟು ಇನ್ಯಾವ ಕಾರಣ ಇದೆ ಎಂದು ಅಭಿಮಾನಿಗಳಿಗೆ ಅರ್ಥವಾಗಿಲ್ಲ. ಆದರೆ ಧಾರವಾಹಿ ನಿಲ್ಲುತ್ತಿರುವುದಂತೂ ಪಕ್ಕಾ ಆಗಿದೆ.

ಗಟ್ಟಿಮೇಳ ಧಾರವಾಹಿಯ ಅಂತಿಮ ಸಂಚಿಕೆಗಳು ನಡೆಯುತ್ತಿದ್ದು, ಜನವರಿ 5ರಂದು ಕೊನೆಯ ಸಂಚಿಕೆ ಪ್ರಸಾರವಾಗುತ್ತದೆ ಎಂದು ಹೇಳಲಾಗುತ್ತಿದೆ. ಇಷ್ಟು ಬೇಗ ಈ ಧಾರವಾಹಿ ನಿಲ್ಲುತ್ತಿದೆಯ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.

Leave A Reply

Your email address will not be published.