Government Schemes: ಗೃಹಲಕ್ಷ್ಮಿ ಯೋಜನೆ ನಂತರ ಮಹಿಳೆಯರಿಗೆ ಮತ್ತೊಂದು ಯೋಜನೆ ತಂದ ಸರ್ಕಾರ. ಇಂದೇ ಅರ್ಜಿ ಹಾಕಿ

0 34

Government Schemes: ನಮ್ಮ ದೇಶದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿರಬೇಕು ಎಂದು ಸರ್ಕಾರವು ಸಾಕಷ್ಟು ಪ್ರಯತ್ನ ಪಡುತ್ತಿದೆ. ಮಹಿಳೆಯರಿಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಒಂದು ನಮ್ಮ ರಾಜ್ಯದಲ್ಲಿ ಜಾರಿಗೆ ಬಂದಿರುವ ಗೃಹಲಕ್ಷ್ಮಿ ಯೋಜನೆ. ಅದನ್ನು ಹೊರತುಪಡಿಸಿ, ಇದೀಗ ಕೇಂದ್ರ ಸರ್ಕಾರ ಕೂಡ ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ತಂದಿದ್ದು, ಆ ಯೋಜನೆಯ ಬಗ್ಗೆ ಇಂದು ನಿಮಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ನಮ್ಮ ರಾಜ್ಯದ ಮಹಿಳೆಯರಿಗೆ ಸಹಾಯ ಆಗಲಿ ಎಂದು ರಾಜ್ಯ ಸರ್ಕಾರವು ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಬಹುತೇಕ ಮಹಿಳೆಯರು ಈ ಯೋಜನೆಗಳ ಸೌಲಭ್ಯ ಪಡೆದು, ಸರ್ಕಾರದ ಸಹಾಯದ ಸದುಪಯೋಗ ಪಡೆದುಕೊಂಡಿದ್ದಾರೆ. ಯಾವುದೇ ಮಹಿಳೆ ಹಣಕಾಸಿನ ವಿಚಾರದಲ್ಲಿ ತೊಂದರೆ ಅನುಭವಿಸಬಾರದು ಎನ್ನುವುದು ಇದರ ಹಿಂದಿನ ಉದ್ದೇಶ ಆಗಿದೆ .

ರಾಜ್ಯ ಸರ್ಕಾರ ಮಾತ್ರವಲ್ಲ ಕೇಂದ್ರ ಸರ್ಕಾರ ಕೂಡ ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ನಿಟ್ಟಿನಲ್ಲಿ ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯ ಹೆಸರು ಲಕ್ಪತಿ ದೀದಿ ಯೋಜನೆ. ಮಹಿಳೆಯರಿಗಾಗಿ ವಿಶೇಷವಾಗಿ ಜಾರಿಗೆ ಬಂದಿರುವ ಯೋಜನೆ ಇದಾಗಿದೆ. ಈ ಯೋಜನೆಯ ಮೂಲಕ ಸಾಕಷ್ಟು ಪ್ರಯೋಜನಗಳು ಮಹಿಳೆಯರಿಗೆ ಸಿಗಲಿದೆ.

ಇದೊಂದು ಕೌಶಲ್ಯ ತರಬೇತಿ ಯೋಜನೆ ಆಗಿದ್ದು, ಮಹಿಳೆಯರು ಯಾರ ಮೇಲು ಅವಲಂಬಿಸಿ ಇರುವುದು ಬೇಡ, ಹಣ ಸಂಪಾದನೆ ಮಾಡಿ ಸ್ವಾವಲಂಬಿಯಾಗಿರಬೇಕು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಡ್ರೋನ್ ಉಪಯೋಗಿಸುವುದು, ಪ್ಲಂಬಿಂಗ್ ಕೆಲಸ, ಎಲ್.ಇ.ಡಿ ಬಲ್ಬ್ ತಯಾರಿಕೆ ಇದೆಲ್ಲವನ್ನು ಕಲಿಸಿಕೊಡಲಾಗುತ್ತದೆ.

ಎಲ್ಲಾ ರಾಜ್ಯದ ಸುಮಾರು 2 ಕೋಟಿ ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ. ಮಹಿಳೆಯರು ಸ್ವಂತವಾಗಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳವುದಕ್ಕೆ ಸಹಾಯ ಮಾಡುವಂಥ ಯೋಜನೆ ಇದಾಗಿದೆ. ಆಸಕ್ತಿ ಮತ್ತು ಅಗತ್ಯ ಇರುವ ಮಹಿಳೆಯರು ಲಕ್ಪತಿ ದೀದಿ ಯೋಜನೆಯ ಸಹಾಯ ಪಡೆದುಕೊಳ್ಳಬಹುದು.

Leave A Reply

Your email address will not be published.