Gruhajyothi Yojane: ಗೃಹಜ್ಯೋತಿ ಫಲಾನುಭವಿಗಳಿಗೆ ಸರ್ಕಾರದಿಂದ ಎಚ್ಚರಿಕೆ, ಇನ್ಮುಂದೆ ಎಲ್ಲರಿಗೂ ಉಚಿತ ವಿದ್ಯುತ್ ಸಿಗಲ್ಲ

0 22

Gruhajyothi Yojane: ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. 4 ಯೋಜನೆಗಳ ಸೌಲಭ್ಯ ಈಗಾಗಲೇ ಜನರಿಗೆ ಸಿಕ್ಕಿದ್ದು, ಐದನೇ ಯೋಜನೆ ಆಗಿರುವ ಯುವನಿಧಿ ಯೋಜನೆ ಮುಂದಿನ ತಿಂಗಳು ಜಾರಿಗೆ ತರಲಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜನರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುತ್ತಿದೆ ಎನ್ನುವ ವಿಚಾರ ಗೊತ್ತಾಗಿದೆ.

ಆದರೆ ಇದೀಗ ಸರ್ಕಾರದಿಂದ ಗೃಹಜ್ಯೋತಿ ಯೋಜನೆಯ ಸೌಲಭ್ಯ ಬಳಸುತ್ತಿರುವ ಎಲ್ಲರಿಗೂ ಒಂದು ವಾರ್ನಿಂಗ್ ಸಿಕ್ಕಿದೆ. ಅದೇನು ಎಂಸರೆ, ಸಾಕಷ್ಟು ಜನರು ವಿದ್ಯುತ್ ದುರ್ಬಳಕೆ ಮಾಡುತ್ತಿದ್ದಾರೆ. ಈ ವಿಚಾರ ಸರ್ಕಾರಕ್ಕೆ ಗೊತ್ತಾಗಿದ್ದು, ಎಲ್ಲರೂ ಕೂಡ ಮಿತಿಯಾಗಿ ವಿದ್ಯುತ್ ಬಳಕೆ ಮಾಡಬೇಕು ಎಂದು ಸರ್ಕಾರ ವಾರ್ನಿಂಗ್ ನೀಡಿದೆ. ಗೃಹಜ್ಯೋತಿ ನಿಯಮದ ಅನುಸಾರ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡುವ ಅವಕಾಶವಿದೆ..

ಮೊದಲೆಲ್ಲಾ ಜನರು ಹಿತಮಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ. ಗೃಹಜ್ಯೋತಿ ಯೋಜನೆ ಬಂದಮೇಲೆ ಬೇಕಾಬಿಟ್ಟಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. 200 ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಕೆ ಆದರೆ ಬಿಲ್ ಪಾವತಿ ಮಾಡಬೇಕಿತ್ತು, ಇನ್ನು ಕೆಲವರಿಗೆ 58 ಯೂನಿಟ್ ಉಚಿತ ವಿದ್ಯುತ್ ಬಳಕೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಜನರು ಸರ್ಕಾರದ ನಿಯಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಅಗತ್ಯವಿಲ್ಲದೆ ಇದ್ದರು ಹೆಚ್ಚು ವಿದ್ಯುತ್ ಬಳಕೆ ಆಗುತ್ತಿದೆ. ಬೆಳಗಿನ ಸಮಯದಲ್ಲಿ ಕೂಡ ವಿದ್ಯುತ್ ದೀಪಗಳನ್ನು ಆನ್ ನಲ್ಲಿಯೇ ಬಿಡುವುದು ಇದೆಲ್ಲಾ ಕೆಲಸಗಳು ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ವಿದ್ಯುತ್ ವಿಚಾರದಲ್ಲಿ ನಷ್ಟ ಉಂಟಾಗುತ್ತಿದ್ದು, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಈಗ ಸರ್ಕಾರ ಜನರಿಗೆ ಮಹತ್ವದ ಮಾಹಿತಿ ನೀಡಿದೆ..

ಇದೀಗ ಸರ್ಕಾರವು ತಿಳಿಸಿರುವುದು ಏನು ಎಂದರೆ, ಎಲ್ಲವೂ ಹೀಗೆ ಮುಂದುವರೆದರೆ ಈಗ ಸಿಗುತ್ತಿರುವ ಹಾಗೆ ಎಲ್ಲರಿಗೂ ಉಚಿತ ವಿದ್ಯುತ್ ಸಿಗುವುದಿಲ್ಲ, ಜನರು ಸರ್ಕಾರಕ್ಕೆ ಮೋಸ ಮಾಡಿದರೆ, ಅದು ಸರ್ಕಾರಕ್ಕೆ ಗೊತ್ತಾದರೆ ಅವರಿಗೆ ಗೃಹಜ್ಯೋತಿ ಯೋಜನೆ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಾರೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ. ಈ ವಿಚಾರ ತಿಳಿದುಕೊಂಡು ಜನರು ವಿದ್ಯುತ್ ಬಳಕೆ ವೇಳೆ ಹೆಚ್ಚು ಗಮನ ವಹಿಸಬೇಕು..

Leave A Reply

Your email address will not be published.