Health Tips: ಹೆಚ್ಚಿನ ಜನರು ಆರೋಗ್ಯದ ಕಾರಣಕ್ಕೆ, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ತಡವಾಗುವುದರಿಂದ ತಕ್ಷಣಕ್ಕೆ ಸೇವಿಸುವ ಆಹಾರ ಪದಾರ್ಥ ಬೇಕು ಎನ್ನುವ ಕಾರಣಕ್ಕೆ ಮೊಟ್ಟೆ ಸೇವಿಸಲು ಬಯಸುತ್ತಾರೆ. ಪದೇ ಪದೇ ಹೋಗಿ ತರುವುದು ಕಷ್ಟ ಎಂದು, ಒಂದು ಸಾರಿ ಮೊಟ್ಟೆ ತಂದು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಫ್ರಿಡ್ಜ್ ನಲ್ಲಿ ಮೊಟ್ಟೆಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿ ಮೊಟ್ಟೆಯನ್ನು ಹೆಚ್ಚು ದಿವಸ ಸ್ಟೋರ್ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದಾ? ಆರೋಗ್ಯಕ್ಕೆ ಏನು ಸಮಸ್ಯೆ ಆಗುವುದಿಲ್ಲವಾ? ತಿಳಿಸುತ್ತೇವೆ ನೋಡಿ..
ಮೊಟ್ಟೆ ಆರೋಗ್ಯಕರವಾದ ಆಹಾರ, ಇದರಲ್ಲಿ ವೈತಮಿನ್ಸ್, ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿ ಇರುವುದರಿಂದ ವೈದ್ಯರು ಕೂಡ ಮೊಟ್ಟೆ ಸೇವಿಸಲು ಹೇಳುತ್ತಾರೆ. ಆದರೆ ಈ ಅಂಶಗಳು ಇರುವ ಮೊಟ್ಟೆಯನ್ನು ಹೆಚ್ಚು ದಿನ ಸೇವಿಸದೇ ಹಾಗೆಯೇ ಫ್ರಿಡ್ಜ್ ನಲ್ಲಿ ಇಟ್ಟರೆ, ಅದು ಅನಾರೋಗ್ಯಕ್ಕೆ ಕಾರಣವಾಗಬಹುದು, ಈ ಕಾರಣಕ್ಕೆ ಹೆಚ್ಚು ಸಮಯ ಮೊಟ್ಟೆಯನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂದು ಹೇಳುತ್ತಾರೆ.
ಹೆಚ್ಚು ಸಮಯ ಫ್ರಿಡ್ಜ್ ನಲ್ಲಿ ಇಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಫ್ರಿಡ್ಜ್ ನಲ್ಲಿ ಇಡುವ ಮೊಟ್ಟೆ 3 ರಿಂದ 5 ವಾರಗಳವರೆಗು ಚೆನ್ನಾಗಿರುತ್ತದೆ. ನಾರ್ಮಲ್ ಟೆಂಪರೇಚರ್ ನಲ್ಲಿ ಇಟ್ಟರೆ ಹಲವು ದಿನಗಳವರೆಗು ಮೊಟ್ಟೆಗಳನ್ನು ಸೇವಿಸುವ ಮಟ್ಟದಲ್ಲಿಯೇ ಇರುತ್ತದೆ. ಇವುಗಳನ್ನು 4 ಡಿಗ್ರಿ ಸೆಲ್ಶಿಯಸ್ ನಲ್ಲಿ ಇಡುವುದು ಒಳ್ಳೆಯದು. ಮೊಟ್ಟೆಗಳ ಲೈಫ್ ಟೈಮ್ ಒಂದು ತಿಂಗಳು ಎಂದು ಹೇಳಬಹುದು. ಇವುಗಳನ್ನು ಹೊರಗಡೆ ಇಟ್ಟರೆ, 7 ದಿನಗಳಲ್ಲಿ ಕೆಟ್ಟು ಹೋಗಬಹುದು.
ಮೊಟ್ಟೆಗಳಲ್ಲಿ ಸಾಲ್ಮೊನ್ನೆಲ್ಲಾ ಎನ್ನುವ ಬ್ಯಾಕ್ಟೀರಿಯಾ ಇರುತ್ತದೆ. ಇವು ಸಾಮಾನ್ಯವಾಗಿ ಹಾಟ್ ಬ್ಲಡ್ ಇರುವ ಪ್ರಾಣಿ ಮತ್ತು ಪಕ್ಷಿಗಳಲ್ಲಿ ಕಂಡುಬರುತ್ತದೆ. ಒಂದು ವೇಳೆ ಮೊಟ್ಟೆಯಲ್ಲಿ ಈ ಬ್ಯಾಕ್ಟೀರಿಯಾ ಇದ್ದರೆ ಇದು ಆರೋಗ್ಯಕ್ಕೆ ಹಾನಿಕರ. ಎಗ್ ಯೋಕ್ ಗೆ ಇದರ ಸೋಂಕು ತಗುಲಬಹುದು, ಇಂಥ ಮೊಟ್ಟೆಗಳನ್ನು ತಿಂದರೆ ವಾಂತಿ, ಬೇಧಿ, ಜ್ವರ, ತಲೆನೋವು ಶುರುವಾಗಬಹುದು. ಈ ಕಾರಣಕ್ಕೆ ಮೊಟ್ಟೆಯನ್ನು ಉತ್ತಮ ರೀತಿಯಲ್ಲಿ ಸ್ಟೋರ್ ಮಾಡುವುದು ಮುಖ್ಯವಾಗುತ್ತದೆ.
ಮೊಟ್ಟೆ ಹಾಳಾಗಿದೆಯೇ ಎಂದು ಗುರುತಿಸುವುದು ಹೇಗೆ ಎಂದು ತಿಳಿಯೋಣ..ಒಂದು ಪಾತ್ರೆಗೆ ನೀರನ್ನು ತುಂಬಿಸಿ, ಮೊಟ್ಟೆಯನ್ನು ಒಳಗೆ ಬಿಡಿ. ಆ ಮೊಟ್ಟೆ ನೇರವಾಗಿ ನೀರಿನ ಅಡಿಗೆ ಹೋದರೆ ಫ್ರೆಶ್ ಆಗಿದೆ ಎಂದು ಅರ್ಥ. ಮೊಟ್ಟೆ ಹಾಳಾಗಿದ್ದರೆ, ನೀರಿನ ಪಾತ್ರೆಯ ಕೆಳಗೆ ಹೋಗಿ, ಮತ್ತೆ ಮೇಲೆ ಬರುತ್ತದೆ. ಮೊಟ್ಟೆ ಹೀಗೆ ತೇಲಿದರೆ ಹಾಳಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಮತ್ತೊಂದು ವಿಧಾನ, ಮೊಟ್ಟೆಯನ್ನು ನಿಮ್ಮ ಕಿವಿಯ ಹತ್ತಿರ ತೆಗೆದುಕೊಂಡು ಬಂದು ಒಂದು ಸಾರಿ ಅಲ್ಲಾಡಿಸಿ, ಚೆಲ್ಲುತ್ತಿರುವ ಶಬ್ಧ ಬಂದರೆ ಮೊಟ್ಟೆ ಹಾಳಾಗಿದೆ ಎಂದು ಅರ್ಥ. ಶಬ್ಧವಿಲ್ಲ ಎಂದರೆ ಚೆನ್ನಾಗಿದೆ ಎಂದು ಅರ್ಥ.
ಮೊಟ್ಟೆಯನ್ನು ಒಡೆದು ಒಂದು ಪ್ಲೇಟ್ ಗೆ ಹಾಕಿದಾಗ, ಕೆಟ್ಟ ವಾಸನೆ ಬಂದರೆ ಮೊಟ್ಟೆ ಹಾಳಾಗಿದೆ ಎಂದು ಅರ್ಥ. ಹಾಗೆಯೇ ಮೊಟ್ಟೆಯನ್ನು ಕುದಿಸಿದ ಬಳಿಕ ಎಗ್ ಯೋಕ್ ಸುತ್ತ, ಹಸಿರು ಅಥವಾ ಕೆಂಪು ಬಣ್ಣ ಕಾಣಿಸಿದರೆ, ಮೊಟ್ಟೆ ಹಾಳಾಗಿದೆ ಎಂದು ಅರ್ಥ.