Health Tips: ಇದ್ದಕ್ಕಿದ್ದಂತೆ ಎಣ್ಣೆ ಹೊಡೆಯೋದು ನಿಲ್ಲಿಸಿದ್ರೆ ಪ್ರಾಣಕ್ಕೆ ಅಪಾಯ! ಹಾಗಿದ್ರೆ ಏನು ಮಾಡಬೇಕು?

0 28

Health Tips: ಸಾಕಷ್ಟು ಜನರಿಗೆ ಮದ್ಯಪಾನ ಸೇವಿಸುವ ಅಭ್ಯಾಸ ಇರುತ್ತದೆ. ಈಗಿನ ಕಾಲದಲ್ಲಿ ಚಿಕ್ಕ ಹುಡುಗರು, ದೊಡ್ಡವರು, ಹುಡುಗಿಯರು ಎಲ್ಲರೂ ಕೂಡ ಮದ್ಯಪಾನ ಸೇವಿಸುವ ಅಭ್ಯಾಸ ಹೊಂದಿದ್ದಾರೆ. ಆದರೆ ಮದ್ಯಪಾನ ಸೇವನೆ ಇಂದ ನಮ್ಮ ಪ್ರಾಣಕ್ಕೆ ತೊಂದರೆ ಇದೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಅರ್ಥ ಮಾಡಿಕೊಂಡವರು ದಿಢೀರ್ ಎಂದು ಸಂಪೂರ್ಣವಾಗಿ ಎಣ್ಣೆ ಬಿಡಬಾರದು. ಆ ರೀತಿ ಮಾಡಿದರೆ ಮತ್ತೆ ನಿಮ್ಮ ಪ್ರಾಣಕ್ಕೆ ತೊಂದರೆ ಆಗಬಹುದು ಅನ್ನುತ್ತಾರೆ ವೈದ್ಯರು.

ದಿಢೀರ್ ಎಂದು ಎಣ್ಣೆ ಬಿಟ್ಟರೆ ಏನಾಗುತ್ತದೆ ಎಂದು ತಿಳಿಯೋಣ..
*ಯಾವಾಗಲೂ ಕುಡಿಯುತ್ತಿದ್ದವರು ಸಡನ್ ಆಗಿ ಕುಡಿಯುವುದನ್ನು ಬಿಟ್ಟರೆ ಅವರಿಗೆ ಮಾನಸಿಕ ಕಿರಿಕಿರಿ ಶುರುವಾಗುತ್ತದೆ. ಇದು ಪ್ರಾಕ್ಟಿಕಲಿ ನಿಜವಾದ ಮಾತು.
*ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿಬಿಟ್ಟರೆ ಆ ವ್ಯಕ್ತಿಗೆ ಪದೇ ಪದೇ ವಿಪರೀತ ತಲೆನೋವು ಬರುವುದಕ್ಕೆ ಶುರುವಾಗುತ್ತದೆ. ಇದು ನೆನಪಲ್ಲಿ ಇರಲಿ.
*ಜಾಸ್ತಿ ಕುಡಿಯುವವರು ದಿಢೀರ್ ಎಂದು ಅಭ್ಯಾಸ ಬಿಟ್ಟರೆ, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬರುವುದಕ್ಕೆ ಶುರುವಾಗುತ್ತದೆ.

*ಕುಡಿಯುವ ಸಮಯದಲ್ಲೇ ಅಸಿಡಿಟಿ, ಗ್ಯಾಸ್ ತೊಂದರೆಗಳು ಇದ್ದರೆ, ಮದ್ಯಸೇವನೆ ಬಿಟ್ಟಾಗ ಇನ್ನು ಜಾಸ್ತಿಯಾಗುತ್ತದೆ.
ಕುಡಿಯುವ ಅಭ್ಯಾಸವನ್ನು ಬಿಡಬೇಕು, ಅದು ಒಳ್ಳೆಯ ಅಭ್ಯಾಸ ಅಂತೂ ಅಲ್ಲ. ಆದರೆ ಬಿಡುವುದಕ್ಕಿಂತ ಮೊದಲು ವೈದ್ಯರ ಸಲಹೆ ಪಡೆದು, ಅವರು ಹೇಳುವ ಕರ್ಮಗಳನ್ನು ಅನುಸರಿಸಿ, ನಂತರ ಕುಡಿತದ ಅಭ್ಯಾಸ ಬಿಡುವುದು ಒಳ್ಳೆಯದು. ಆಗ ನಿಮ್ಮ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.

Leave A Reply

Your email address will not be published.