Weight Loss Tips: ವಿಂಟರ್ ವೇಳೆ ದೇಹದ ತೂಕ ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ

0 28

Weight Loss Tips: ಇದು ಚಳಿಗಾಲ, ವಾತಾವರಣದಲ್ಲಿ ಚಳಿ ಜಾಸ್ತಿ ಇದ್ದಾಗ ಹೆಚ್ಚಿನ ಜನರು ಮನೆಯಿಂದ ಹೊರಗೆ ಹೋಗಲು ಬಯಸುವುದಿಲ್ಲ. ಮನೆಯ ಒಳಗೆ ಬೆಚ್ಚಗಿರಲು ಇಷ್ಟಪಡುತ್ತಾರೆ. ಇದರಿಂದ ದೇಹದ ಫಿಸಿಕಲ್ ಆಕ್ಟಿವಿಟಿಗಳು ಕಡಿಮೆಯಾಗಿ, ಹೆಚ್ಚಾಗಿ ಮಲಗುವ ಕಾರಣ ದೇಹದ ತೂಕ ಜಾಸ್ತಿಯಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು., ದೇಹದ ತೂಕ ಜಾಸ್ತಿ ಆಗಬಾರದು ಎಂದರೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಕು..

1.ದಾಳಿಂಬೆ: ಇದು ಬಹುತೇಕ ಜನರು ಇಷ್ಟಪಡುವ ಹಣ್ಣು. ದಾಳಿಂಬೆ ಎಷ್ಟು ರುಚಿಯಾಗಿದೆಯೋ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಈ ಹಣ್ಣಿನಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ, ಹಗೀಯೇ ದೇಹದಲ್ಲಿ ಫ್ಯಾಟ್ ಬರ್ನ್ ಮಾಡುವ ಗುಣ ಕೂಡ ಈ ಹಣ್ಣಿನಲ್ಲಿದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ದಾಳಿಂಬೆ ಹಣ್ಣನ್ನು ಸೇವಿಸಬಹುದು, ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು.

2.ಸಿಟ್ರಸ್ ಫ್ರೂಟ್ಸ್: ಚಳಿಗಾಲಕ್ಕೆ ಈ ಹಣ್ಣುಗಳು ಕೂಡ ಒಳ್ಳೆಯದು. ಇವುಗಳಲ್ಲಿ ವೈಟಮಿನ್ ಸಿ ಅಂಶ ಜಾಸ್ತಿ ಇರುತ್ತದೆ, ಹಾಗೆಯೇ ಇಮ್ಯುನಿಟಿ ಪವರ್ ಕೂಡ ಇರುವ ಕಾರಣ ಸಿಟ್ರಸ್ ಹಣ್ಣುಗಳ ಸೇವನೆ ಇಂದ ದೇಹಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿ ದಿನ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು ಅಥವಾ ಇನ್ನಿತರ ಸಿಟ್ರಸ್ ಫ್ರೂಟ್ಸ್ ಸೇವಿಸಬಹುದು.

3.ಕೇಲ್:- ಇದು ಅತಿಹೆಚ್ಚಾಗಿ ಬಳಸುವಂಥ ಸೊಪ್ಪಿನ ತರಕಾರಿ. ಇದರಲ್ಲಿ ಫೈಬರ್, ಐರನ್ ಕಂಟೆಂಟ್ ಜಾಸ್ತಿ ಇರುತ್ತದೆ. ಜೊತೆಗೆ ಕ್ಯಾಲೋರಿ ಕೂಡ ಕಡಿಮೆ ಇರುತ್ತದೆ. ಇದರಿಂದ ನಿಮ್ಮ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಸಲಾಡ್ ರೀತಿ ತಿನ್ನಬಹುದು.

4.ವಾಲ್ನಟ್:- ಈ ಡ್ರೈ ಫ್ರೂಟ್ಸ್ ಬೆಲೆ ದುಬಾರಿ, ಆದರೆ ಇದರಲ್ಲಿ ಫೈಬರ್, ಪ್ರೊಟೀನ್ ಎಲ್ಲಾ ಅಂಶ ಹೆಚ್ಚಾಗಿರುತ್ತದೆ. ಹಾರ್ಟ್ ಹೆಲ್ತ್ ಗೆ ಇದು ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ತೂಕ ಕಡಿಮೆ ಮಾಡಲು ಹಾಗೂ ಆರೋಗ್ಯ ಚೆನ್ನಾಗಿರಲು ಎಲ್ಲದಕ್ಕೂ ಸಹಾಯ ಮಾಡುತ್ತದೆ.

5..ಹಸಿ ಶುಂಟಿ :- ಇದು ಮಸಾಲೆ ಪದಾರ್ಥಗಳಲ್ಲಿ ಒಂದು. ಹಸಿ ಶುಂಠಿ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲ ಜೀರ್ಣಕ್ರಿಯೆ ವೃದ್ಧಿಸುತ್ತದೆ. ತರಕಾರಿಗಳ ಜೊತೆಗೆ ಸಲಾಡ್ ರೀತಿ ತಿನ್ನಬಹುದು. ಅಥವಾ ಬೇರೆ ಅಡುಗೆಗಳಲ್ಲೂ ಶುಂಠಿ ಬಳಸಬಹುದು.

Leave A Reply

Your email address will not be published.