Health Tips: ಚಳಿಗಾಲದಲ್ಲಿ ಈ ಸೊಪ್ಪುಗಳನ್ನ ಸೇವಿಸಿದ್ರೆ ಯಾವುದೇ ರೋಗ ಬರಲ್ಲ!

0 26

Health Tips: ಈಗಾಗಲೇ ಚಳಿಗಾಲ ಶುರುವಾಗಿದೆ, ಈ ವೇಳೆ ನಾನಾ ಕಾರಣಗಳಿಂದ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುತ್ತದೆ. ಜ್ವರ, ಶೀತ ಇಂಥ ಸಮಸ್ಯೆಗಳು ಸಾಮಾನ್ಯವಾಗಿ ಬರಬಹುದು. ಆದರೆ ಇವುಗಳಿಂದ ತೊಂದರೆ ಅನುಭವಿಸದೆ ಹುಷಾರಾಗಿ ಇರುವುದಕ್ಕೆ ಈ ಸೊಪ್ಪುಗಳನ್ನು ಸೇವಿಸಬಹುದು. ಸೊಪ್ಪುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಾ ಚೆನ್ನಾಗಿರುತ್ಯದೆ.. ಆ ಸೊಪ್ಪುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೀಳ್ಯದ ಎಲೆ :- ಈ ಎಲೆಗಳು ಬಹಳ ಕಡಿಮೆ ದುಡ್ಡಿಗೆ ಸಿಗುತ್ತದೆ. ವೀಳ್ಯದ ಎಲೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರ ಮಾಡುತ್ತದೆ, ತಲೆನೋವು, ಕೆಮ್ಮು, ನೆಗಡಿ, ಇಂಥ ಸಮಸ್ಯೆಗಳನ್ನು ಸರಿ ಮಾಡುತ್ತದೆ.

ಬೇವಿನ ಸೊಪ್ಪು :- ಇದು ರುಚಿಯಲ್ಲಿ ಬಹಳ ಕಹಿ ಇರುತ್ತದೆ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಬ್ಯಾಕ್ಟಿರಿಯಲ್, ಆಂಟಿ ಫಂಗಲ್ ಅಂಶಗಳು ಇರುತ್ತದೆ., ಆಂಟಿ ಆಕ್ಸಿಡಂಟ್ ಅಂಶಗಳು ಇರುತ್ತದೆ. ಮೊಡವೆಗೆ ಇದು ತುಂಬಾ ಒಳ್ಳೆಯದು, ಗಾಯ ಸಮಸ್ಯೆ ಇದು ಒಳ್ಳೆಯದು..

ಸದಾ ಪುಷ್ಪ :- ಇದು ನೋಡುವುದಕ್ಕೆ ಬಹಳ ಸುಂದರವಾದ ಹೂವು, ಈ ಗಿಡದ ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಕ್ಕರೆ ಖಾಯಿಲೆ ಮತ್ತು ಗಂಟಲಿಗೆ ಸಮಸ್ಯೆಗೆ ಇದು ತುಂಬಾ ಒಳ್ಳೆಯದು..

ಮೆಂತ್ಯೆ ಸೊಪ್ಪು :- ಚಳಿಗಾಲ ಇದ್ದಾಗ ಈ ಸೊಪ್ಪನ್ನು ಜಾಸ್ತಿ ಸೇವಿಸುತ್ತಾರೆ. ಈ ಸೊಪ್ಪಿನಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಫೋಲೆಟ್, ಕಬ್ಬಿಣ ಅಂಶ ಇರುತ್ತದೆ. ಟೈಪ್ 2 ಡೈಯಾಬಿಟಿಸ್ ಗೆ ಇದು ಒಳ್ಳೆಯದು.

ಚಕೋತಾ ಸೊಪ್ಪು :- ಇದು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಈ ಅಂಶಗಳು ಜಾಸ್ತಿ ಇದೆ. ಈ ಸೊಪ್ಪು ತಿನ್ನುವುದರಿಂದ ದೇಹದ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಸರಿ ಮಾಡುತ್ತದೆ.

Leave A Reply

Your email address will not be published.