Kareena Kapoor: ಬಾಲಿವುಡ್ ನ ಸ್ಟಾರ್ ನಟಿಯರಲ್ಲಿ ಒಬ್ಬರು ಕರೀನಾ ಕಪೂರ್. ಕಪೂರ್ ಮನೆತನದ ಕರೀನಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳ ಫೇವರೆಟ್ ನಟಿ ಆಗಿದ್ದಾರೆ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 2 ದಶಕವಾಗಿದೆ, ಸಿನಿಮಾ ಜೊತೆಗೆ ತಾವು ಕೊಡುವ ಹೇಳಿಕೆಯ ಕಾರಣ ಆಗಾಗ ಸುದ್ದಿಯಾಗುವ ನಟಿ ಕರೀನಾ ಕಪೂರ್ ಅವರು ಇದೀಗ ತಮ್ಮ ಪಾತ್ರದಿಂದಲೇ ರೈಲ್ವೆ ಇಲಾಖೆಯ ಆದಾಯ ಜಾಸ್ತಿಯಾಗಿದೆ ಎಂದು ಹೇಳಿ ಟ್ರೋಲ್ ಆಗಿದ್ದಾರೆ.
ಸೆಲೆಬ್ರಿಟಿಗಳು ಎಂದರೆ ಅವರು ಆಡುವ ಒಂದೊಂದು ಮಾತನ್ನು ಕೂಡ ಜನರು ಗಮನಿಸುತ್ತಾರೆ, ಯಾವುದಾದರೂ ಹೇಳಿಕೆ ಹೆಚ್ಚು ಕಡಿಮೆ ಆದರೆ, ಅದು ಟ್ರೋಲ್ ಆಗುವುದು ಸುದ್ದಿ ಆಗುವುದಂತು ಖಂಡಿತ. ಹಾಗಾಗಿ ಲೈಮ್ ಲೈಟ್ ನಲ್ಲಿರುವ ಕೆಲಾವಿದರು, ಯಾವಾಗಲೂ ಹುಷಾರಾಗಿ ಇರುವುದು ಒಳ್ಳೆಯದು. ಇದೀಗ ನಟಿ ಕರೀನಾ ಕಪೂರ್ ಅವರು ಕೂಡ ಇದೇ ರೀತಿ ಮಾತನಾಡಿ, ಟ್ರೋಲ್ ಗೆ ಒಳಗಾಗಿದ್ದಾರೆ.
ಕರೀನಾ ಕಪೂರ್ ಅವರು ನಟಿಸಿ, ಸೂಪರ್ ಹಿಟ್ ಆಗಿರುವ ಸಿನಿಮಾಗಳಲ್ಲಿ ಒಂದು ಜಬ್ ವಿ ಮೆಟ್, ಈ ಸಿನಿಮಾದಲ್ಲಿ ಗೀತ್ ಪಾತ್ರದಲ್ಲಿ ನಟಿಸಿದ್ದರು. ಗೀತ್ ಪಾತ್ರ ಕರೀನಾ ಕಪೂರ್ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಜನಪ್ರಿಯತೆ ತಂದುಕೊಟ್ಟಿತ್ತು. ಇಂದಿಗೂ ಕೂಡ ಜನರು ಕರೀನಾ ಅವರನ್ನು ಗೀತ್ ಹೆಸರಿನಲ್ಲಿ ಗುರುತಿಸುತ್ತಾರೆ. ಬಾಲಿವುಡ್ ನ ಆಲ್ ಟೈಮ್ ಫೇವರೆಟ್ ಸಿನಿಮಾಗಳಲ್ಲಿ ಒಂದು ಜಬ್ ವಿ ಮೆಟ್. ಈ ಸಿನಿಮಾದಲ್ಲಿ ಹಲವು ದೃಶ್ಯಗಳನ್ನು ಟ್ರೇನ್ ನಲ್ಲಿ ಚಿತ್ರೀಕರಿಸಲಾಗಿದೆ.
ಹೀರೋ ಶಾಹಿದ್ ಕಪೂರ್ ಅವರನ್ನು ನಾಯಕಿ ಗೀತ್ ಮೊದಲ ಸಾರಿ ಭೇಟಿ ಆಗುವುದು ಕೂಡ ಟ್ರೇನ್ ನಲ್ಲಿಯೇ. ಇವರಿಬ್ಬರ ಜರ್ನಿ ಮುಂದಕ್ಕೆ ಹೇಗೆ ಸಾಗುತ್ತದೆ ಎನ್ನುವುದು ಸಿನಿಮಾದ ಕಥೆ ಆಗಿದೆ. ಈ ಸಿನಿಮಾ ಆಗಿನ ಎಲ್ಲಾ ಹುಡುಗ ಹುಡುಗಿಯರ ಫೇವರೆಟ್ ಆಗಿತ್ತು. ಜಬ್ ವಿ ಮೆಟ್ ಸಿನಿಮಾ ಕುರಿತು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ಕರೀನಾ ಕಪೂರ್ ಅವರು, ತಮ್ಮ ಪಾತ್ರದಿಂದ ರೈಲ್ವೆ ಇಲಾಖೆಯ ರೆವೆನ್ಯೂ ಹೆಚ್ಚಾಗಿದೆ ಎಂದಿದ್ದಾರೆ..
“ನಾನು ನಟಿಸಿದ ಗೀತ್ ಪಾತ್ರದಿಂದ, ಜಬ್ ವಿ ಮೆಟ್ ಸಿನಿಮಾ ಇಂದ ಹರೇಮ್ ಪ್ಯಾಂಟ್ ಗಳ ಸೇಲ್ಸ್ ಜಾಸ್ತಿಯಾಯಿತು ಹಾಗೆ ರೈಲ್ವೆ ಇಲಾಖೆಯ ರೆವೆನ್ಯೂ ಜಾಸ್ತಿ ಆಯಿತು..” ಎಂದಿದ್ದಾರೆ. ಕರೀನಾ ಕಪೂರ್ ಅವರ ಈ ಹೇಳಿಕೆ ಭಾರಿ ವೈರಲ್ ಆಗಿದ್ದು, ಬಾಲಿವುಡ್ ಕಲಾವಿದರರಿಗೆ ಬುದ್ಧಿ ಇಲ್ಲ, ಇಂಥ ಹೇಳಿಕೆಗಳನ್ನು ನೀಡುವ ಕಾರಣರಿಂದಲೇ ಜನರು ಇವರ ಜೊತೆಗೆ ಕನೆಕ್ಟ್ ಆಗುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.