Ration Card Update: ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತೊಮ್ಮೆ ಅವಕಾಶ ನೀಡಿದ ಸರ್ಕಾರ, ಈ ದಿನಾಂಕದ ಒಳಗೆ ಮಾಡಿಸಿ.

0 15

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ಸರಿ ಇರಬೇಕು, ಮನೆಯ ಮುಖ್ಯಸ್ಥರ ಕಾಲಮ್ ನಲ್ಲಿ ಮನೆಯ ಯಜಮಾನಿಯ ಹೆಸರು ಇರಬೇಕು ಹೀಗೆ ಸಾಕಷ್ಟು ವಿಚಾರಗಳಿವೆ. ಇದೆಲ್ಲವೂ ಸರಿ ಇದ್ದರೆ ಮಾತ್ರ ನಿಮಗೆ ಸರ್ಕಾರದ ಸೌಲಭ್ಯಗಳು ಸಿಗುತ್ತದೆ.

ಇಷ್ಟು ಕಂಡೀಷನ್ ಗಳು ಇರುವುದರಿಂದ ಹಲವು ಜನರು ರೇಷನ್ ಕಾರ್ಡ್ ನಲ್ಲಿ ನೀಡಿರುವ ಮಾಹಿತಿ ಸರಿ ಇಲ್ಲದ ಕಾರಣ ಅವರಿಗೆ ಸರ್ಕಾರದ ಪ್ರಯೋಜನ ಸಿಗುತ್ತಿಲ್ಲ. ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಲು ಸರ್ಕಾರ ಯಾವಾಗ ಅವಕಾಶ ಕೊಡುತ್ತದೆ ಎಂದು ಜನರು ಕಾದು ಕುಳಿತಿದ್ದರು. ಇದೀಗ ಸರ್ಕಾರದ ವತಿಯಿಂದ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಸರ್ಕಾರ ಅವಕಾಶ ನೀಡುತ್ತಿದೆ.

ಎಲ್ಲಾ ವಿಭಾಗದಲ್ಲಿ ತಿದ್ದುಪಡಿ ಮಾಡಿಸುವುದಕ್ಕೆ ಮೂರು ದಿನಗಳ ಅವಕಾಶವನ್ನು ಸರ್ಕಾರ ನೀಡಿದ್ದು, ಈ ವಿಚಾರದ ಬಗ್ಗೆ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಆಗಿರುವ ಘ್ಯಾನೇಂದ್ರ ಅವರು ತಿಳಿಸಿದ್ದಾರೆ. ತಿದ್ದುಪಡಿಯ ಮೊದಲ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಆಕ್ಟೊಬರ್ 5 ರಿಂದ 7ರ ವರೆಗು ಬೆಳಗ್ಗೆ 10 ಗಂಟೆಯಿಂದ ಸಂಜೆ 7ಗಂಟೆಯ ವರೆಗು ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕಿದೆ.

ಸೆಪ್ಟೆಂಬರ್ ನಲ್ಲಿ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಅವಕಾಶ ಇತ್ತು, ಆದರೆ ಸರ್ವರ್ ಪ್ರಾಬ್ಲಮ್ ಇಂದಾಗಿ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ತಿದ್ದುಪಡಿ ಮಾಡಿಸಲು ಸರ್ಕಾರವು ಜನರಿಗೆ ಮತ್ತೊಂದು ಅವಕಾಶ ನೀಡಿದ್ದು, ಈ ವೇಳೆ ರೇಷನ್ ಕಾರ್ಡ್ ಅಪ್ಡೇಟ್ ಗೆ ಬಯೋಮೆಟ್ರಿಕ್ ಮಾಡಿಸಲು ಬೇಕಾಗುವ ಕಂಪ್ಯೂಟರ್ ಎಲ್ಲವೂ ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಹಾಗಾಗಿ ಈ ಕೇಂದ್ರಗಳಲ್ಲಿ ನೀವು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಈ ಬಾರಿ ಸರ್ಕಾರ ಕೊಟ್ಟಿರುವ ಅವಕಾಶದಲ್ಲಿ, ನೀವು ಏನೆಲ್ಲಾ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ನೋಡಿವುದಾದರೆ..
*ಹೆಸರು ತಿದ್ದುಪಡಿ, ರೇಶನ್ ಸೌಲಭ್ಯ ಪಡೆಯುವ ಕೇಂದ್ರದ ತಿದ್ದುಪಡಿ ಮಾಡಿಸಿಕೊಳ್ಳಬಹುದು.
*ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರು ಸೇರ್ಪಡೆ ಮತ್ತು ಡಿಲೀಟ್ ಮಾಡಿಸಬಹುದು.
*ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರ ಹೆಸರು ಬದಲಾವಣೆ..
*ನಿಮ್ಮ ಮನೆಯ ಗೃಹಲಕ್ಷ್ಮಿ ಮಹಿಳೆಯೇ ಮನೆಯ ಮುಖ್ಯಸ್ಥೆ ಎಂದು ಹೆಸರು ಬದಲಾಯಿಸಬಹುದು.

ಈ ತಿದ್ದುಪಡಿಯನ್ನು ರಾಜ್ಯದ ಎಲ್ಲಾ ಕಡೆ ಮಾಡಿಸಬಹುದು. ಒಂದೊಂದು ವಿಭಾಗಕ್ಕೂ ಕೂಡ 3 ದಿನಗಳ ಕಾಲ ಬದಲಾವಣೆ ಮಾಡುವ ಅವಕಾಶ ನೀಡಲಾಗಿದೆ. ಮೊದಲು ತಿದ್ದುಪಡಿ ಮಾಡುವ ಅವಕಾಶ ಕೊಟ್ಟಿರುವುದು ಬೆಂಗಳೂರು ನಗರ ಮತ್ತು ಗ್ರಾಮಾಂತರ ವಲಯದಲ್ಲಿ, ಆಕ್ಟೊಬರ್ 5 ರಿಂದ 7ರ ವರೆಗು ತಿದ್ದುಪಡಿ ಮಾಡಿಸಿಕೊಳ್ಳಬಹುದು. ಕಲಬುರಗಿ ವಲಯದಲ್ಲಿ ಆಕ್ಟೊಬರ್ 8 ರಿಂದ 11 ರವರೆಗೂ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಬೆಳಗಾವಿ ವಲಯದಲ್ಲಿ ಆಕ್ಟೊಬರ್ 11ರಿಂದ 13ರವರೆಗು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ನಮ್ಮ ರಾಜ್ಯದಲ್ಲಿ ಈಗ ಹೆಚ್ಚಿನ ಜನರ ಬಳಿ ಬಿಪಿಎಲ್ ಕಾರ್ಡ್ ಇರುವ ಕಾರಣ, ಬಿಪಿಎಲ್ ಕಾರ್ಡ್ ಗಳ ವಿತರಣೆ ಮಾಡುವುದನ್ನು ನಿಲ್ಲಿಸಲಾಗಿದೆ. 2017ರಿಂದ ಹೊರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆಗಿದ್ದು, ಅವುಗಳನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದ ಮುನಿಯಪ್ಪ ಅವರು ತಿಳಿಸಿದ್ದಾರೆ.

Leave A Reply

Your email address will not be published.