Rishab Shetty: ಕಾಂತಾರ ಪ್ರೀಕ್ವೆಲ್ ರಿಷಬ್ ಶೆಟ್ಟಿ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

0 19

Rishab Shetty: ಇಂದು ಭಾರತ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ಅಂದ್ರೆ ರಿಷಬ್ ಶೆಟ್ಟಿ ಎಂದು ಹೇಳಬಹುದು. ಕಾಂತಾರ ಸಿನಿಮಾ ಮೂಲಕ ಇವರಿಗೆ ಸ್ಟಾರ್ಡಮ್ ದುಪ್ಪಟ್ಟಾಗಿದೆ. ಕಾಂತಾರ ಸಿನಿಮಾ ಇವರ ಇಷ್ಟು ವರ್ಷಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದೀಗ ರಿಷಬ್ ಶೆಟ್ಟಿ ಅವರು ಕಾಂತಾರ ಪ್ರೀಕ್ವೆಲ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾ ಕಳೆದ ವರ್ಷ ತೆರೆಕಂಡು, ಅದ್ಭುತ ಯಶಸ್ಸು ಗಳಿಸಿದ ಸಿನಿಮಾ, ಕರಾವಳಿ ಸಂಸ್ಕೃತಿಯನ್ನ ಇಡೀ ಭಾರತ ಸಿನಿಪ್ರಿಯರು ನೋಡುವ ಹಾಗೆ ಮಾಡಿದ ಸಿನಿಮಾ. ಕಾಂತರದಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯ, ಸಿನಿಮಾದ ಕಥೆ, ದೈವದ ಅನುಭವ ಇದೆಲ್ಲವೂ ಚಿತ್ರರಂಗಕ್ಕೆ ಮತ್ತು ಸಿನಿಪ್ರಿಯರಿಗೆ ಹಿಂದೆಂದೂ ಆಗಿರದಂಥ ವಿಭಿನ್ನ, ವಿಶೇಷವಾದ ಅನುಭವ ನೀಡಿದೆ ಎಂದರೆ ತಪ್ಪಲ್ಲ.

ಕನ್ನಡದಲ್ಲಿ ಬಿಡುಗಡೆ ಆಗಿದ್ದ ಕಾಂತಾರ ಇಲ್ಲಿ ಯಶಸ್ಸು ಕಂಡು, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗೆ ಡಬ್ ಆಗಿ ತೆರೆಕಂಡು ಎಲ್ಲಾ ಭಾಷೆಗಳಲ್ಲಿಯೂ ಹೆಸರು ಗಳಿಸಿತು. ಕಡಿಮೆ ಬಜೆಟ್ ನಲ್ಲಿ ತಯಾರಾಗಿದ್ದ ಕಾಂತಾರ ಕಲೆಕ್ಟ್ ಮಾಡಿದ್ದು ಬರೋಬ್ಬರಿ 400 ಕೋಟಿ. ಇದೀಗ ಕಾಂತಾರ ಪ್ರೀಕ್ವೆಲ್ ತಯಾರಿಕೆಯಲ್ಲಿದೆ. ಕಾಂತಾರ: ಎ ಲೆಜೆಂಡ್ ಚಾಪ್ಟರ್ 1 ಶೀರ್ಷಿಕೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಬಾರಿ ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ತಯಾರಾಗುತ್ತಿದೆ ಕಾಂತಾರ..

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತೆರೆಕಾಣಲಿದೆ. ನವೆಂಬರ್ 27ರಂದು ಕಾಂತಾರ ಪ್ರೀಕ್ವೆಲ್ ನ ಫಸ್ಟ್ ಲುಕ್ ಬಿಡುಗಡೆಯಾಗಿ ಅಧ್ಭುತವಾದ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಫಸ್ಟ್ ಲುಕ್ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ಇದೊಂದು ನೆಕ್ಸ್ಟ್ ಲೆವೆಲ್ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿ ಅವರು ಕಾಂತಾರ ಪ್ರೀಕ್ವೆಲ್ ಗೆ ಪಡೆಯಲಿರುವ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದೆ.

ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾಗೆ 4 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಸಿನಿಮಾ 400 ಕೋಟಿ ಗಳಿಸಿತ್ತು, ಈ ಬಾರಿ ಕಾಂತಾರ ಪ್ರೀಕ್ವೆಲ್ ಗೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಹೌದು, ರಿಷಬ್ ಶೆಟ್ಟಿ ಅವರ ಸಂಭಾವನೆ ಈಗ 25 ಪಟ್ಟು ಜಾಸ್ತಿಯಾಗಿದೆ. ಈಗಾಗಲೇ 50% ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದು, ಸಿನಿಮಾದ ಲಾಭದಲ್ಲಿ ಕೂಡ ರಿಷಬ್ ಅವರಿಗೆ ಶೇರ್ ಸಿಗಲಿದೆಯಂತೆ. ಹಾಗೆಯೇ ಸಿನಿಮಾ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ.

Leave A Reply

Your email address will not be published.