Salumarada Thimmakka: ಸಾಲುಮರದ ತಿಮ್ಮಕ್ಕ ಚೇತರಿಸಿಕೊಳ್ಳುತ್ತಿದ್ದಾರೆ: ಮಗನಿಂದ ವೃಕ್ಷಮಾತೆಯ ಆರೋಗ್ಯದ ಬಗ್ಗೆ ಅಪ್ಡೇಟ್

0 26

ನಮ್ಮ ರಾಜ್ಯದ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು ಸಾಲುಮರದ ತಿಮ್ಮಕ್ಕ. ಇವರ ಬಗ್ಗೆ ಶಾಲಾ ಪಠ್ಯಪುಸ್ತಕಗಳಲ್ಲಿ ಪಾಠವಿದೆ ಎಂದರೆ ನಾವು ಇವರ ವ್ಯಕ್ತಿತ್ವದ ಬಗ್ಗೆ, ಇವರ ಸಾಧನೆ ಬಗ್ಗೆ ತಿಳಿದುಕೊಳ್ಳುವುದು ಕಷ್ಟವಲ್ಲ. ಕರ್ನಾಟಕದ ವೃಕ್ಷಮಾತೆ ಎಂದೇ ಸಾಲುಮರದ ತಿಮ್ಮಕ್ಕನವರನ್ನು ಕರೆಯುತ್ತಾರೆ. ಅನಾರೋಗ್ಯದ ಕಾರಣದಿಂದ ನಿನ್ನೆ ತಿಮ್ಮಕ್ಕನವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇಂದು ಅವರ ಆರೋಗ್ಯದ ಬಗ್ಗೆ ಸುಳ್ಳು ವದಂತಿಗಳು ಕೇಳುಬಂದಿವೆ.

ಸೋಷಿಯಲ್ ಮೀಡಿಯಾದಲ್ಲಿ ಸಾಲುಮರದ ತಿಮ್ಮಕ್ಕನವರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಹಲವರು ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಈ ಸುದ್ದಿ ಸುಳ್ಳು ಎಂದು ಸಾಲುಮರದ ತಿಮ್ಮಕ್ಕನವರ ದತ್ತುಪುತ್ರ ಬಳ್ಳೂರು ಉಮೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಕಾರಣದಿಂದ ಅದು ಸುಳ್ಳು ಎಂದು ತಿಳಿಸುವ ಸಲುವಾಗಿಯೇ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ ಉಮೇಶ್..

ಅಮ್ಮನ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲ, ಚೇತರಿಸಿಕೊಳ್ಳುತ್ತಿದ್ದಾರೆ, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಉಮೇಶ್ ಅವರು ಸ್ಪಷ್ಟನೆ ನೀಡಿದ್ದು, ಸಾಲುಮರದ ತಿಮ್ಮಕ್ಕನವರು ಆಸ್ಪತ್ರೆಯಲ್ಲಿರುವ ವಿಡಿಯೋ ಒಂದನ್ನು ಕೂಡ ಮಾಧ್ಯಮದವರಿಗೆ ನೀಡಿದ್ದಾರೆ. ಆ ವಿಡಿಯೋದಲ್ಲಿ ತಿಮ್ಮಕ್ಕನವರನ್ನು ಮಾತನಾಡಿಸುತ್ತಾ, ತಿಂಡಿ ತಿನ್ನಿಸುತ್ತಾ ಇರುವುದನ್ನು ನೋಡಬಹುದು..

ಒಟ್ಟಿನಲ್ಲಿ ತಿಮ್ಮಕ್ಕನವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಅಸಲಿ ವಿಚಾರ ಹೊರಬಂದ ಬಳಿಕ ಜನರಿಗೂ ಈಗ ನೆಮ್ಮದಿಯಾಗಿದೆ. ಅನಾರೋಗ್ಯ ಉಂಟಾದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಲುಮರದ ತಿಮ್ಮಕ್ಕನವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶೀಘ್ರದಲ್ಲೇ ತಿಮ್ಮಕ್ಕನವರು ಚೇತರಿಸಿಕೊಳ್ಳಲಿದ್ದಾರೆ ಎಂದು ಕೂಡ ಅವರ ಮಗ ಉಮೇಶ್ ಮಾಹಿತಿ ನೀಡಿದ್ದಾರೆ.

ಸಾಲುಮರದ ತಿಮ್ಮಕ್ಕನವರು ಒಂದು ರೀತಿ ಎಲ್ಲರ ಮೆಚ್ಚಿನ ಮಹಿಳೆ, ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿರುವವರು ಎಂದು ಹೇಳಬಹುದು. ಮಕ್ಕಳಿಲ್ಲದ ಕಾರಣ ಗಿಡಮರಗಳೇ ತಮ್ಮ ಮಕ್ಕಳು ಎಂದು ಭಾವಿಸಿ, ತಿಮ್ಮಕ್ಕ ಮತ್ತು ಅವರ ಪತಿ ಇಬ್ಬರು ಸೇರಿ ಸಾವಿರಾರು ಗಿಡಗಳನ್ನು ನೆಟ್ಟು, ಮರವಾಗಿ ಬೆಳೆಸಿ ಪರಿಸರ ಸಂರಕ್ಷಣೆ ಮಾಡಿದ್ದಾರೆ, ಹಾಗೆಯೇ ಜನರಿಗೆ ಉಸಿರಾಗಿರುವ ಗಾಳಿ ಸಿಗುವ ಹಾಗೆ ಮಾಡಿದ್ದಾರೆ. ತಿಮ್ಮಕ್ಕನವರ ಈ ಸಾಧನೆ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ.

Leave A Reply

Your email address will not be published.