Tips: ಕಂಟ್ರೋಲ್ ಮಾಡೋಕೆ ಆಗದೇ ಇರುವಷ್ಟು ಕೋಪ ಬರುತ್ತಾ? ಈ ರೀತಿ ಮಾಡಿ ಕೂಲ್ ಆಗೋಕೆ 5 ನಿಮಿಷ ಸಾಕು!

0 39

Tips: ಮನುಷ್ಯನಿಗೆ ದೊಡ್ಡ ಶತ್ರು ಅಂದ್ರೆ ಅದು ಕೋಪ. ಸಡನ್ ಆಗಿ ಬರೋ ಕೋಪ ಆ ವ್ಯಕ್ತಿಯ ಬದುಕನ್ನೇ ಹಾಳು ಮಾಡಿಬಿಡಬಹುದು. ಹಾಗಾಗಿ ಕೋಪದ ಕೈಗೆ ಬುದ್ಧಿ ಕೊಡಬಾರದು ಶಾಂತ ರೀತಿಯಲ್ಲಿ ಇರಬೇಕು ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೋಪ ಕಡಿಮೆ ಮಾಡಿಕೊಳ್ಳಲು ಆಗೋದಿಲ್ಲ. ಹಾಗಂತ ಕೋಪವನ್ನು ಹಾಗೆಯೇ ಬಿಡಬಾರದು…

ಕೋಪವನ್ನು ಇನ್ನೊಬ್ಬರ ಮೇಲೆ ವ್ಯಕ್ತಪಡಿಸಿದಾಗ ಅದರಿಂದ ನಿಮಗೂ ತೊಂದರೆ ಅವರಿಗು ನೋವಾಗುತ್ತದೆ. ಹಾಗಾಗಿ ಕೋಪ ಬಂದಾಗ ಕಂಟ್ರೋಲ್ ಮಾಡಿ, ಶಾಂತ ರೀತಿಯಲ್ಲಿ ಇರುವುದು ಒಳ್ಳೆಯದು. ಒಂದು ವೇಳೆ ನಿಮಗೂ ಕೋಪದ ಸಮಸ್ಯೆ ಇದ್ದು, ಕಂಟ್ರೋಲ್ ಮಾಡಲು ಆಗುತ್ತಿಲ್ಲ ಎಂದರೆ, ಇಂದು ನಾವು ತಿಳಿಸುವ ಟಿಪ್ಸ್ ಗಳನ್ನು ಫಾಲೋ ಮಾಡಿ. ಅದರಿಂದ ನಿಮ್ಮ ಕೋಪ ಕೇವಲ 5 ನಿಮಿಷದಲ್ಲಿ ಕೂಲ್ ಆಗುತ್ತದೆ.

ಕೋಪ ಬಂದಾಗ ಯಾರ ಮಾತುಗಳನ್ನು ಕೇಳಬೇಕು ಅನಿಸಿವುದಿಲ್ಲ, ಆ ವೇಳೆ ನೀವು ಯೋಚನೆ ಮಾಡುವ ಶಕ್ತಿ ಮತ್ತು ನಿಮ್ಮ ಬುದ್ಧಿ ಎರಡು ಕೂಡ ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಾಗಾಗಿ ಕೋಪ ಬಂದಾಗ ನೀವು ತಪ್ಪುಗಳನ್ನು ಮಾಡುವುದೇ ಹೆಚ್ಚು. ಈ ಕಾರಣಕ್ಕೆ ಕೋಪ ಬಂದಾಗ ನೀವು ಆದಷ್ಟು ಮೌನವಾಗಿ ಇರುವುದನ್ನು ಅಭ್ಯಾಸ ಮಾಡಿ, ಕೋಪದಿಂದ ಮಾತನಾಡಿ ತೊಂದರೆ ಮಾಡಿಕೊಳ್ಳುವುದಕ್ಕಿಂತ, ಶಾಂತವಾಗಿ ಇರುವುದು ಒಳ್ಳೆಯದು..

ಕೋಪವಿದ್ದಾಗ ಬಾಯಿಂದ ಬರುವ ಪದಗಳು ಕೂಡ ಎಲ್ಲೆಲ್ಲೋ ಹೋಗಬಹುದು, ನಿಮಗೆ ಅಥವಾ ಇನ್ನೊಬ್ಬರಿಗೆ ಅದರಿಂದ ನೋವಾಗಬಹುದು. ಒಂದು ವೇಳೆ ನೀವು ಕೋಪದಲ್ಲಿದ್ದಾಗ, ಅದೆಷ್ಟೇ ಕಷ್ಟ ಅನ್ನಿಸಿದರೂ ಸಹ ಮಾತು ಕಡಿಮೆ ಆಡುವುದಕ್ಕೆ ಪ್ರಯತ್ನ ಪಡಿ, ಜೊತೆಗೆ ಆ ಜಾಗದಿಂದ ಸ್ವಲ್ಪ ದೂರ ಹೋಗಿಬಿಡುವುದು ಇನ್ನು ಒಳ್ಳೆಯದು. ಆಗ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ.

ಕೋಪ ಬಂದಾಗ ಅದರ ಬಗ್ಗೆ ಯೋಚನೆ ಕಡಿಮೆ ಮಾಡಿ, ನಿಮಗೆ ಇಷ್ಟ ಆಗುವ ಕೆಲಸದ ಬಗ್ಗೆ ಯೋಚಿಸಿ, ನಿಮಗೆ ಇಷ್ಟ ಅಗುವಂಥ ಕೆಲಸಗಳನ್ನು ಮಾಡಿ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಕೋಪ ಕಡಿಮೆ ಆಗುತ್ತದೆ.

Leave A Reply

Your email address will not be published.