ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದ ಹಾಗೆ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಅಂಥ ವಿಡಿಯೋಗಳಲ್ಲಿ ಕೆಲವು ಜನರಿಗೆ ತಮಾಷೆ ಎನ್ನಿಸಿದರು, ಇನ್ನು ಕೆಲವು ಫೋಟೋ ಅಥವಾ ವಿಡಿಯೋಗಳು ನಿಯಮ ಉಲ್ಲಂಘನೆ ಮಾಡಿದ ಹಾಗೂ ಇರುತ್ತದೆ. ಒಂದೆರಡು ದಿನಗಳ ಹಿಂದೆ ಬೆಂಗಳೂರಿನ ಮೆಟ್ರೋ ನಲ್ಲಿ ನಡೆದ ಒಂದು ಘಟನೆಯ ವಿಡಿಯೋ ಒಂದು ವೈರಲ್ ಆಗಿತ್ತು.
ಮೆಟ್ರೋ ನಲ್ಲಿ ಪ್ರಯಾಣ ಮಾಡುವವರಿಗೆ ಕೆಲವು ನಿಯಮಗಳು ಇರುತ್ತದೆ, ಅವುಗಳನ್ನು ಪಾಲಿಸಿಕೊಂಡು ಹೋಗಬೇಕು. ಇತ್ತೀಚೆಗೆ ವ್ಯಕ್ತಿಯೊಬ್ಬ ಮೆಟ್ರೋ ಒಳಗೆ ಕೂತು ಗೋಬಿ ತಿನ್ನುತ್ತಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ವ್ಯಕ್ತಿ ಗೋಬಿ ತಿನ್ನುತ್ತಿರುವುದನ್ನು ಅವರ ಸ್ನೇಹಿತರು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ವಿಡಿಯೋ ವೈರಲ್ ಆಗುತ್ತಿದ್ದ, ಹಾಗೆಯೇ BMRCL ಕಣ್ಣಿಗೆ ಈ ವಿಡಿಯೋ ಬಿದ್ದಿದ್ದು, ತಕ್ಷಣವೇ ಈ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನಿಗೆ ದಂಡ ವಿಧಿಸಿದ್ದಾರೆ. ಈ ವ್ಯಕ್ತಿ ಜಯನಗರದಲ್ಲಿ ಇರುವ ದೊಡ್ಡ ಹೆಸರು ಇರುವ ಆಭರಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದ್ದು, ಪ್ರತಿ ದಿನ ಈ ವ್ಯಕ್ತಿ ಸಂಪಿಗೆ ಮಾರ್ಗದ ಮೆಟ್ರೋ ನಲ್ಲಿ ಪ್ರಯಾಣ ಮಾಡುತ್ತಾನೆ ಎಂದು ಮಾಹಿತಿ ತಿಳಿದುಬಂದಿದೆ.
ಮೆಟ್ರೋ ನಿಯಮವನ್ನು ಉಲ್ಲಂಘಿಸಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿಗೆ ₹500 ರೂಪಾಯಿ ದಂಡ ವಿಧಿಸಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಈ ರೀತಿ ನಿಯಮ ಉಲ್ಲಂಘನೆ ಮಾಡಬಾರದು ಎಂದು ತಿಳಿದುಬಂದಿದೆ. ಇಂಥ ಘಟನೆಗಳು ಆಗಾಗ ನಡೆಯುತ್ತದೆ. ಇದೀಗ ಈ ಘಟನೆ ವೈರಲ್ ಆಗಿ, ಮೆಟ್ರೋ ನಲ್ಲಿ ಇನ್ನೊಮ್ಮೆ ಈ ರೀತಿ ಮಾಡಬಾರದು ಎನ್ನುವುದು ಅರ್ಥವಾಗುವ ಹಾಗೆ ಮಾಡಿದೆ..
ಇದೇ ಕಾರಣದಿಂದ ನಾವು ಎಲ್ಲೇ ಹೋದರು, ಏನೇ ಮಾಡಿದರೂ ಅಲ್ಲಿನ ನಿಯಮಗಳನ್ನು ತಿಳಿದುಕೊಂಡು ಮಾಡಬೇಕು. ಮೆಟ್ರೋ, ಬಸ್, ರೈಲು ಅಥವಾ ವಿಮಾನ ಯಾವುದರಲ್ಲೇ ಪ್ರಯಾಣ ಮಾಡುವಾಗಲೂ ನಮ್ಮ ಹುಷಾರಿನಲ್ಲಿ ನಾವಿರಬೇಕು ಎನ್ನುವುದು ಕೂಡ ಈ ಘಟನೆ ಇಂದ ಗೊತ್ತಾಗುತ್ತದೆ..