Weight Loss: ಸರಿಯಾದ ಸಮಯಕ್ಕೆ ಎಳನೀರು ಕುಡಿದರೆ ದೇಹದ ತೂಕ ಕಡಿಮೆ ಮಾಡಬಹುದು!

0 23

Weight Loss: ಎಳನೀರು ಇದು ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನರು ಎಳನೀರು ಕುಡಿಯಲು ಬಯಸುತ್ತಾರೆ. ಆದರೆ ಎಳನೀರು ಕುಡಿದು ದೇಹದ ತೂಕವನ್ನು ಕಡಿಮೆ ಮಾಡಬಹುದು ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಸರಿಯಾದ ಸಮಯಕ್ಕೆ ಎಳೆನೀರು ಕುಡಿದರೆ ನಿಮ್ಮ ದೇಹದ ತೂಕ ಕಡಿಮೆ ಆಗುವುದು ಖಂಡಿತ. ಎಳನೀರು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಐರನ್ ಅಂಶ, ಜೀವಸತ್ಯಗಳು ತುಂಬಿರುತ್ತದೆ. ಹಾಗಾಗಿ ಎಳನೀರು ದೇಹವನ್ನು ಹೈಡ್ರೇಟೆಡ್ ಆಗಿಡಲು ಸಹಾಯ ಮಾಡುತ್ತದೆ.

ಹಾಗೆಯೇ ಎಳನೀರಿನಲ್ಲಿ ಕೂಡ 2 ಬೇರೆ ಬೇರೆ ವಿಧ ಇರುತ್ತದೆ, ಒಂದು ಹಸಿರು ಎಳನೀರು, ಒಂದು ಕೆಂಪು ಬಣ್ಣದ್ದು. ಈ ಎರಡರ ಗುಣ ಬಹುತೇಕ ಒಂದೇ ರೀತಿ ಇರುತ್ತದೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ಕಡಿಮೆ ಇದ್ದರೂ ಸಹ, ದೇಹಕ್ಕೆ ಹಸಿವು ಆಗುವ ಹಾಗೆ ಮಾಡುವುದಿಲ್ಲ. ಒಂದು ಎಳನೀರನ್ನು ಪೂರ್ತಿ ಕುಡಿದರೆ, ಹಸಿವು ಕೂಡ ಆಗುವುದಿಲ್ಲ.

ಬೆಳಗ್ಗೆ ಏನು ತಿನ್ನುವ ಮೊದಲು ಎಳನೀರು ಕುಡಿಯುವುದರ ಹಿಂದೆ ಸಾಕಷ್ಟು ಪ್ರಯೋಜನವಿದೆ, ಎಳನೀರಿನಲ್ಲಿ ಲಾರಿಕ್ ಆಸಿಡ್ ಇರುವುದರಿಂದ ಇದು ದೇಹದ ಇಮ್ಯುನಿಟಿಯನ್ನು ಜಾಸ್ತಿ ಮಾಡುತ್ತದೆ. ಗರ್ಭಿಣಿ ಮಹಿಳೆಯರು ಎಳನೀರು ಕುಡಿಯುವುದು ಒಳ್ಳೆಯದು, ಇದರಿಂದ ದೇಹದಲ್ಲಿ ನೀರಿನ ಅಂಶ ಯಾವಾಗಲೂ ಇರುವ ಹಾಗೆ ನೋಡಿಕೊಳ್ಳುತ್ತದೆ. ಹಾಗೆಯೇ ಮಲಬದ್ಧತೆ ಅಂಥ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ವಾಕರಿಕೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಊಟ ಮಾಡುವುದಕ್ಕಿಂತ ಮೊದಲು ಎಳನೀರು ಕುಡಿದರೆ ಊಟ ಕಡಿಮೆ ಮಾಡಲು ಸರಿ ಹೋಗುತ್ತದೆ, ಈ ಮೂಲಕ ಹೆಚ್ಚು ಕ್ಯಾಲೋರಿ ಸೇವಿಸುವುದು ಕಡಿಮೆ ಆಗುತ್ತದೆ. ರಾತ್ರಿ ಮಲಗುವುದಕ್ಕಿಂತ ಮೊದಲು ಎಳನೀರು ಕುಡಿಯುವುದು ಒಳ್ಳೆಯದು, ಇದರಿಂದ ದೇಹದಲ್ಲಿ ವಿಷದಂಥ ಅಂಶಗಳು ಕಡಿಮೆ ಆಗುತ್ತದೆ, ಜೊತೆಗೆ ಮೂತ್ರನಾಳ ಕ್ಲೀನ್ ಆಗುತ್ತದೆ.

ಎಳನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇಷ್ಟೆಲ್ಲಾ ಪ್ರಯೋಜನಗಳು ಎಳನೀರು ಕೂಡಿಯುವುದರಿಂದ ಸಿಗುತ್ತದೆ. ಹಾಗಾಗಿ ನೀವು ಪ್ರತಿದಿನ ಎಳನೀರು ಕುಡಿದರೆ ದೇಹದ ತೂಕವನ್ನು ಕಡಿಮೆ ಮಾಡಬಹುದು.

Leave A Reply

Your email address will not be published.