Chanakya Neeti: ದಾಂಪತ್ಯ ಜೀವನ ಸುಖಮಯವಾಗಿರಬೇಕು ಎಂದರೆ ಈ ಕೆಲವು ಕೆಲಸಗಳನ್ನು ಮಾಡಬೇಡಿ

0 21

Chanakya Neeti: ಆಚಾರ್ಯ ಚಾಣಕ್ಯರು ವರ್ಷಗಳ ಹಿಂದೆ ಬರೆದಿರುವ ಚಾಣಕ್ಯ ನೀತಿ ಪುಸ್ತಕದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಆ ಕೆಲವು ವಿಚಾರಗಳನ್ನ ನಾವು ಪಾಲಿಸುತ್ತಾ ಬಂದರೆ ಸಾಕು, ನಮ್ಮ ಬದುಕಿಗೆ ಯಶಸ್ಸು ಸಿಗುವುದು ಖಂಡಿತ. ಚಾಣಕ್ಯ ನೀತಿಯಲ್ಲಿ ಒಬ್ಬ ಮನುಷ್ಯನ ಬದುಕು ಹೇಗಿರಬೇಕು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ, ಹಾಗೆಯೇ ದಾಂಪತ್ಯ ಜೀವನ ಹೇಗಿರಬೇಕು ಎನ್ನುವುನ್ನು ಹೇಳಿಕೊಟ್ಟಿದ್ದಾರೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದರೆ ಆಚಾರ್ಯ ಚಾಣಕ್ಯರು ತಿಳಿಸೀರುವ ಈ ಕೆಲವು ವಿಚಾರವನ್ನು ನೀವು ಅನುಸರಿಸಬಹುದು..

*ಮುಖ್ಯವಾಗಿ ಗಂಡ ಹೆಂಡತಿ ತಮ್ಮಿಬ್ಬರ ವಿಚಾರವನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳಬಾರದು. ಪರ್ಸನಲ್ ವಿಚಾರಗಳು ಯಾವಾಗಲೂ ಅವರಿಬ್ಬರ ನಡುವೆ ಮಾತ್ರ ಇರಬೇಕು, ಮೂರನೇ ವ್ಯಕ್ತಿಯವರೆಗು ಹೋಗಬಾರದು. ಆಗ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

*ದಾಂಪತ್ಯ ಜೀವನದ ಎರಡು ಚಕ್ರಗಳು ಪತಿ ಮತ್ತು ಪತ್ನಿ. ಇಬ್ಬರು ಹೊಂದಾಣಿಕೆ ಇಂದ ಇದ್ದು, ಸಾಮರಸ್ಯ ಹೊಂದಿದ್ದರೆ ಸಂಸಾರ ಎನ್ನುವ ಗಾಡಿ ಸರಾಗವಾಗಿ ಸಾಗುತ್ತದೆ. ಇಬ್ಬರು ಕೂಡ ಒಬ್ಬರ ಮೇಲೆ ಮತ್ತೊಬ್ಬರು ಅಹಂಕಾರ ತೋರಿಸಬಾರದು.

*ಗಂಡ ಹೆಂಡತಿ ಇಬ್ಬರಿಗು ಒಬ್ಬರ ಮೇಲೆ ಮತ್ತೊಬ್ಬರಿಗೆ ಗೌರವ ಇರಬೇಕು. ಯಾವುದೇ ಸಂಬಂಧ ಯಶಸ್ವಿ ಆಗುವುದು ಪರಸ್ಪರ ಗೌರವ ಇದ್ದಾಗ ಮಾತ್ರ. ಆಗ ಅವರ ಸಂಬಂಧ ಸಹ ಗಟ್ಟಿ ಆಗುತ್ತದೆ. ಈ ಕಾರಣಕ್ಕೆ ಗಂಡ ಹೆಂಡತಿ ಯಾವತ್ತಿಗೂ ಅಗೌರವದಿಂದ ನಡೆದುಕೊಳ್ಳಬಾರದು.

*ದಾಂಪತ್ಯ ಜೀವನದಲ್ಲಿ ತಾಳ್ಮೆ ಎನ್ನುವುದು ತುಂಬಾ ಮುಖ್ಯ. ಹಾಗಾಗಿ ಗಂಡ ಹೆಂಡತಿಯ ಬದುಕಿನಲ್ಲಿ ತಾಳ್ಮೆ ಕಳೆದುಕೊಳ್ಳದೆ ಇರುವುದು ಬಹಳ ಒಳ್ಳೆಯದು. ತಾಳ್ಮೆಯಿಂದ ಇದ್ದು ಕೆಲಸಗಳನ್ನು ಮಾಡಿದಷ್ಟು ಒಳ್ಳೆಯ ರೀತಿಯಲ್ಲಿ ಬದುಕು ಉತ್ತಮವಾಗಿರುತ್ತದೆ.

Leave A Reply

Your email address will not be published.