Jyothi Rai: ತೆಲುಗು ನಿರ್ದೇಶಕನ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡದ ನಟಿ, ಎರಡನೇ ಮದುವೆಗೆ ರೆಡಿಯಾದ ಜ್ಯೋತಿ ರೈ

Written by Pooja Siddaraj

Published on:

ನಟಿ ಜ್ಯೋತಿ ರೈ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ, ಜ್ಯೋತಿ ರೈ ಅವರು ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿದ್ದಾರೆ. ಹಲವು ಧಾರವಾಹಿಗಳಲ್ಲಿ ನಟಿಸಿ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ನಟಿ ಎನ್ನಿಸಿಕೊಂಡಿದ್ದಾರೆ. ಇದೀಗ ನಟಿ ಜ್ಯೋತಿ ರೈ ಅವರು ಎರಡನೇ ಮದುವೆಗೆ ಸಿದ್ಧವಾಗಿದ್ದು, ತೆಲುಗು ನಿರ್ದೇಶಕನ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ನಟಿ ಜ್ಯೋತಿ ರೈ ಅವರು ಬಂದೆ ಬರುತಾವ ಕಾಲ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಜೋಗುಳ, ಕಸ್ತೂರಿ ನಿವಾಸ, ಅನುರಾಗ ಸಂಗಮ, ಕನ್ಯಾದಾನ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಧಾರವಾಹಿ ಲೋಕಕ್ಕೂ ಕಾಲಿಟ್ಟಿರುವ ಜ್ಯೋತಿ ರೈ ಅವರು ಅಲ್ಲಿ ಸಹ ಹಲವು ಧಾರವಾಹಿಗಳಲ್ಲಿ ನಟಿಸಿ, ಬೇಡಿಕೆ ಹೊಂದಿದ್ದಾರೆ.

ತೆಲುಗಿನ ಗುಪ್ಪೆಡಂತ ಮನಸು ಧಾರವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಜ್ಯೋತಿ ರೈ ಅವರು ಮೂಲತಃ ಮಡಿಕೇರಿಯವರು, ಇವರು ಬೆಳೆದಿದ್ದು ಪುತ್ತೂರಿನಲ್ಲಿ, ಈಗ ಜ್ಯೋತಿ ರೈ ಅವರು ಹೆಚ್ಚಾಗಿ ತೆಲುಗಿನಲ್ಲಿ ನಟನೆ ಮಾಡುತ್ತಿರುವ ಕಾರಣ ಹೈದರಾಬಾದ್ ನಲ್ಲಿ ಸೆಟ್ಲ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಜ್ಯೋತಿ ರೈ ಅವರು ಹಾಟ್ ಫೋಟೋಸ್ ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದರು..

ಇದೀಗ ಇವರು ತಮ್ಮ ಎಂಗೇಜ್ಮೆಂಟ್ ಸುಳಿವು ನೀಡಿದ್ದಾರೆ, ತೆಲುಗಿನ ನಿರ್ದೇಶಕ ಸುಕು ಪೂರ್ವಜ್ ಜೊತೆಗೆ ಆಗಾಗ ಕ್ಯೂಟ್ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ ಜ್ಯೋತಿ ರೈ ಅವರು ಈಗಲೂ ಕೆಲವು ಫೋಟೋಸ್ ಶೇರ್ ಮಾಡಿದ್ದು, ತಮ್ಮ ಎಂಗೇಜ್ಮೆಂಟ್ ಆಗಿದೆ ಎನ್ನುವ ರೀತಿಯಲ್ಲಿ ರಿಂಗ್ ಸಿಂಬಲ್ ಜೊತೆಗೆ ಹಾರ್ಟ್ ಸಿಂಬಲ್ ಗಳನ್ನು ಕ್ಯಾಪ್ಶನ್ ನಲ್ಲಿ ಹಾಕಿ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಗೆ ಕಮೆಂಟ್ಸ್ ಆಫ್ ಮಾಡಿದ್ದು, ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.

ನಟಿ ಜ್ಯೋತಿ ರೈ ಅವರು ಆಗಾಗ ನಿರ್ದೇಶಕ ಸುಕು ಅವರೊಡನೆ ಇರುವ ಫೋಟೋಸ್ ಶೇರ್ ಮಾಡಿಕೊಳ್ಳುತ್ತಿದ್ದರು, ಇವರಿಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಈ ಬಗ್ಗೆ ಜ್ಯೋತಿ ರೈ ಅವರು ನೇರವಾಗಿ ಮಾತನಾಡಿರಲಿಲ್ಲ, ಈಗಲೂ ಕೂಡ, ಎಂಗೇಜ್ಮೆಂಟ್ ಆಗಿದೆ ಎಂದು ಜ್ಯೋತಿ ರೈ ಅವರು ನೇರವಾಗಿ ಹೇಳಿಕೊಂಡಿಲ್ಲ. ಸಿಂಬಲ್ ಗಳನ್ನು ಮಾತ್ರವೇ ಹಂಚಿಕೊಂಡಿದ್ದಾರೆ..

ಇನ್ನು ಜ್ಯೋತಿ ರೈ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಪದ್ಮನಾಭ್ ಎನ್ನುವವರ ಜೊತೆಗೆ ಮದುವೆಯಾಗಿದ್ದರು. ಆದರೆ ಮೊದಲ ಗಂಡನಿಂದ ದೂರವೇ ಉಳಿದಿದ್ದಾರೆ. ಜ್ಯೋತಿ ರೈ ಅವರಿಗೆ 11 ವರ್ಷದ ಮಗ ಕೂಡ ಇದ್ದಾನೆ. ಆದರೆ ಕೆಲ ಸಮಯದಿಂದ ಇವರು ತೆಲುಗು ನಿರ್ದೇಶಕನ ಜೊತೆಗೆ ಪ್ರೀತಿಯಲ್ಲಿದ್ದು, ಶೀಘ್ರದಲ್ಲೇ ಇವರಿಬ್ಬರ ಮದುವೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಜ್ಯೋತಿ ರೈ ಅವರು ಈಗ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲು ಇಲ್ಲ, ತೆಲುಗು ಧಾರವಾಹಿಗಳಲ್ಲೇ ಹೆಚ್ಚಾಗಿ ನಟಿಸುತ್ತಿರುವ ಕಾರಣ ಜ್ಯೋತಿ ರೈ ಅವರು ಹೈದರಾಬಾದ್ ನಲ್ಲೇ ನೆಲೆಸಿದ್ದಾರೆ. ಫೋಟೋಶೂಟ್ ಗಳ ಮೂಲಕವೇ ಹೆಚ್ಚಾಗಿ ಸುದ್ದಿಯಾಗುತ್ತಿದ್ದ ಜ್ಯೋತಿ ರೈ ಅವರು ಇದೀಗ ಎರಡನೇ ಮದುವೆ ಮತ್ತು ಎಂಗೇಜ್ಮೆಂಟ್ ವಿಚಾರದಿಂದ ಭಾರಿ ಸುದ್ದಿಯಾಗಿದ್ದಾರೆ.

Leave a Comment