Rakshak: 2 ವಾರಗಳ ನಂತರ ಬಿಗ್ ಮನೆಯೊಳಗೆ ಕಣ್ಣೀರು ಹಾಕಿದ ರಕ್ಷಕ್, ಸ್ಟ್ರಾಂಗ್ ಹುಡುಗ ಅತ್ತಿದ್ದು ಯಾಕೆ?

0 53

Rakshak: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 3 ವಾರಗಳ ಸಮಯವಾಗುತ್ತಿದೆ. ಇಂದು ಕಿಚ್ಚ ಸುದೀಪ್ ಅವರು ಈ ಸೀಸನ್ ನ ಮೂರನೇ ಪಂಚಾಯಿತಿ ನಡೆಸಿಕೊಡಲಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯ ಟಾಸ್ಕ್ ಗಳು ಬಹಳ ಕುತೂಹಲಕಾರಿಯಾಗಿದ್ದವು ಎಂದರೆ ತಪ್ಪಲ್ಲ. ಎರಡು ಗುಂಪುಗಳಾಗಿ ಬಿಗ್ ಬಾಸ್ ಮನೆ ಸೆಪರೇಟ್ ಆಗಿತ್ತು.

ಒಂದು ಗುಂಪಿಗೆ ತನಿಷಾ ಕ್ಯಾಪ್ಟನ್, ಇನ್ನೊಂದು ಗುಂಪಿಗೆ ನಮ್ರತಾ ಕ್ಯಾಪ್ಟನ್ ಆಗಿದ್ದರು. ಈಗ ಈ ವಾರದ ಎಲ್ಲಾ ಟಾಸ್ಕ್ ಗಳು ಮುಗಿದಿದ್ದು, ತನಿಶಾ ಅವರ ಟೀಮ್ ಟಾಸ್ಕ್ ಗೆದ್ದು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಇತ್ತ ನಮ್ರತಾ ಟೀಮ್ ಸೋತು ಬೇಸರದಲ್ಲಿದ್ದಾರೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದವರು ಬುಲೆಟ್ ರಕ್ಷಕ್. ರಕ್ಷಕ್ ನಮ್ರತಾ ಅವರ ಟೀಮ್ ನಲ್ಲಿದ್ದರು..

ಈ ವಾರ ಕ್ಯಾಪ್ಟನ್ ಆಗಿದ್ದರು ಸಹ, ಟಾಸ್ಕ್ ಗಳಲ್ಲಿ ಪಾಲ್ಗೊಂಡರೇ ಹೊರತು, ರಕ್ಷಕ್ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದೀಗ ಮೂರನೇ ವಾರ ಮುಗಿಯುವ ಸಮಯದಲ್ಲಿ ರಕ್ಷಕ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕಿರುವುದು ರಕ್ಷಕ್ ಅವರು ತಮ್ಮ ಫ್ಯಾಮಿಲಿ ನೆನೆದು. ಮನೆಯಿಂದ ಈ ವಾರ ಬಟ್ಟೆ ಬಂದಿರುವುದನ್ನು ನೋಡಿ ಅಮ್ಮ, ಅಕ್ಕ ಎಲ್ಲರನ್ನು ನೆನೆದು ಕಣ್ಣೀರು ಹಾಕಿದ್ದಾರೆ ಬುಲೆಟ್ ರಕ್ಷಕ್.

ಬಟ್ಟೆಗಳನ್ನು ನೋಡಿ, ಮನೆಯ ಕ್ಯಾಮೆರಾ ಒಂದರ ಬಳಿ ಹೋಗಿ, “ಈಗ ಮನೆಯಲ್ಲಿ ನಾನೊಬ್ಬ ಮಿಸ್ ಆಗಿದ್ದೀನಿ, ಮೂರನೇ ವಾರಕ್ಕೆ ನೀವು ಕಳಿಸಿರೋ ಬಟ್ಟೆ ಬಂದಿದೆ ಅಕ್ಕ..ತುಂಬಾ ಚೆನ್ನಾಗಿದೆ ಅಕ್ಕ, ನನ್ನಿಂದ ಏನಾದರೂ ಬೇಜಾರಾಗಿದ್ರೆ ಕ್ಷಮಿಸಿ ಅಕ್ಕ. ಇಲ್ಲಿ ನಾನು ಸಂತೋಷವಾಗಿದ್ದೀನಿ, ಮನೆಯಲ್ಲಿ ನೀವೆಲ್ಲರೂ ಚೆನ್ನಾಗಿದ್ದೀರಾ ಅಂದುಕೊಂಡಿದ್ದೀನಿ..” ಎಂದು ಹೇಳಿ ಕಣ್ಣೀರು ಹಾಕಿದ್ದಾರೆ ರಕ್ಷಕ್. ಇವರನ್ನು ಭಾಗ್ಯಶ್ರೀ ಮತ್ತು ತನಿಷಾ ಸಮಾಧಾನ ಮಾಡಿದ್ದಾರೆ.

ಎರಡನೇ ವಾರ ರಕ್ಷಕ್ ಕ್ಯಾಪ್ಟನ್ ಆಗಿದ್ದರು. ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಟಾಸ್ಕ್ ಗೆದ್ದು, ನೀತು ಅವರು ಕ್ಯಾಪ್ಟನ್ ಆಗಿದ್ದಾರೆ. ದಿನಗಳು ಕಳೆಯುತ್ತಾ, ಬಿಗ್ ಬಾಸ್ ಮನೆಯ ಆಟ ಹೆಚ್ಚು ರೋಚಕವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ, ಹಾಗೆಯೇ ಈ ವಾರದ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು ಯಾವೆಲ್ಲಾ ವಿಷಯಗಳನ್ನು ಮಾತನಾಡುತ್ತಾರೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.