Rashmika Mandanna: ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಷ್ಟು ಹಣ ಚಾರ್ಜ್ ಮಾಡ್ತಾರೆ ಗೊತ್ತಾ?

0 27

Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಹೀರೋಯಿನ್, ಕಾಲಿವುಡ್ ಬಾಲಿವುಡ್ ಎಲ್ಲಾ ಕಡೆ ಸಿನಿಮಾ ಮಾಡುತ್ತಾ ಸುದ್ದಿಯಾಗುತ್ತಾರೆ ರಶ್ಮಿಕಾ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಲಿಪ್ ಲಾಕ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಈ ಮೊದಲು ನಟ ವಿಜಯ್ ದೇವರಕೊಂಡ ಅವರೊಡನೆ 2 ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು, ಅನಿಮಲ್ ಸಿನಿಮಾದ ಲಿಪ್ ಲಾಕ್ ದೃಶ್ಯಕ್ಕೆ ರಶ್ಮಿಕಾ ಅವರು ಪಡೆದಿರುವ ಹೆಚ್ಚುವರಿ ಸಂಭಾವನೆ ಎಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದ ಹುಡುಗಿ, ಇವರು ನಟನೆ ಶುರು ಮಾಡಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಬಳಿಕ ಚಲೋ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಗೀತಾ ಗೋವಿಂದಂ ಸಿನಿಮಾ. ಈ ಸಿನಿಮಾ ಇಂದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿ ಕೂಡ ಹೆಚ್ಚು ಹೆಸರು ಮಾಡಿತು ಎಂದರೆ ತಪ್ಪಲ್ಲ. ಇವರಿಬ್ಬರ ಬಗ್ಗೆ ಕೂಡ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ.

ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ರಶ್ಮಿಕಾ ಮಂದಣ್ಣ ಅವರು ನಂತರ ತಮಿಳು ಚಿತ್ರರಂಗಕ್ಕೂ ಲಗ್ಗೆ ಇಟ್ಟರು. ನಟ ಕಾರ್ತಿ ಅವರೊಡನೆ ವಿಜಯ್ ಅವರೊಡನೆ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ರಶ್ಮಿಕಾ ಅವರಿಗೆ ಪುಷ್ಪ ಸಿನಿಮಾ ಇನ್ನು ದೊಡ್ಡ ಮಟ್ಟದ ಕ್ರೇಜ್ ತಂದುಕೊಟ್ಟಿತು, ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡರು. ಬಾಲಿವುಡ್ ಇಂದಲೂ ಅವಕಾಶ ಪಡೆದುಕೊಂಡರು.

ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಗುಡ್ ಬೈ ಸಿನಿಮಾ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಡನೆ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದರು. ನಂತರ ರಶ್ಮಿಕಾ ಅವರು ನಟ ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳು ಜನರಿಗೆ ಬಹಳ ಇಷ್ಟವಾಗಿದೆ. ಸಿನಿಮಾ ವಿಚಾರಕ್ಕೆ ಸುದ್ದಿಯಾಗುವ ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.

ಇನ್ಸ್ಟಾಗ್ರಾಮ್ ನಲ್ಲಿ ರಶ್ಮಿಕಾ ಅವರು ಪೋಸ್ಟ್ ಮಾಡುವ ಫೋಟೋಸ್ ಗೆ ಭಾರಿ ಲೈಕ್ಸ್ ಕಮೆಂಟ್ಸ್ ಬರುತ್ತದೆ. ರಶ್ಮಿಕಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 4 ಕೋಟಿ ಫಾಲೋವರ್ಸ್ ಇದ್ದು, ಈ ಕಾರಣಕ್ಕೆ ರಶ್ಮಿಕಾ ಅವರು ಹಾಕುವ ಪೋಸ್ಟ್ ಗಳಿಗೆ ಸಾಕಷ್ಟು ಸಂಭಾವನೆ ಪಡೆಯುತ್ತಾರೆ. ಹಾಗೆಯೇ ಇವರು ಹಲವು ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಅವುಗಳಿಗೆ ಸಂಬಂಧಿಸಿದ ಪೋಸ್ಟ್ ಗಳನ್ನು ಕೂಡ ಶೇರ್ ಮಾಡುತ್ತಾರೆ.

ಅವುಗಳಿಂದಲೂ ರಶ್ಮಿಕಾ ಮಂದನ್ನ ಅವರಿಗೆ ಸಂಭಾವನೆ ಸಿಗುತ್ತದೆ. ಈ ರೀತಿಯಲ್ಲಿ ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ಇಂದ ಮತ್ತು ಬ್ರಾಂಡ್ ಗಳಿಂದ ಒಂದು ಪೋಸ್ಟ್ ಲಕ್ಷಗಟ್ಟಲೇ ಹಣ ಚಾರ್ಜ್ ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಸಿನಿಮಾಗಳಿಗೆ ಕೋಟಿ ಜ್ಯೋತಿ ಸಂಭಾವನೆ ಪಡೆಯುವ ರಶ್ಮಿಕಾ ಅವರು ಪೋಸ್ಟ್ ಗಳಿಗೆ ಲಕ್ಷಗಟ್ಟಲೇ ಚಾರ್ಜ್ ಮಾಡುತ್ತಾರೆ.

Leave A Reply

Your email address will not be published.