Relationship: ನೀವು ಪ್ರೀತಿ ಮಾಡುವ ವ್ಯಕ್ತಿ ನಿಮ್ಮಿಂದ ದೂರ ಆಗಬಾರದು ಅಂದ್ರೆ, ಈ ರೀತಿ ಮಾಡಿ

0 66

Relationship: ಪ್ರೀತಿ ಅನ್ನೋದು ಪ್ರತಿ ವ್ಯಕ್ತಿಯ ಬದುಕಿನಲ್ಲಿ ಬರುವ ಮಧುರವಾದ ಭಾವನೆ. ಪ್ರೀತಿಯ ಭಾವನೆ ಯಾರಿಗೆ, ಯವಾಗಜ್ ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳೋಕೆ ಆಗಲ್ಲ. ಪ್ರೀತಿಗೆ ಆಸ್ತಿ, ಅಂತಸ್ತು, ಸೌಂದರ್ಯ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಒಳ್ಳೆಯ ಹೃದಯ ಮನಸ್ಸು ಇದ್ದರೆ ಸಾಕು. ಹೀಗೆ ಪ್ರತಿ ವ್ಯಕ್ತಿಗೂ ಒಬ್ಬರ ಮೇಲೆ ಪ್ರೀತಿ ಇದ್ದೆ ಇರುತ್ತದೆ. ಆದರೆ ಪ್ರೀತಿಸುವ ವ್ಯಕ್ತಿಗಳು ಹಲವು ಕಾರಣಗಳಿಂದ ನಿಮ್ಮಿಂದ ದೂರ ಆಗಬಹುದು. ಆದರೆ ನೀವು ಇಷ್ಟಪಡುವ ವ್ಯಕ್ತಿ ನಿಮ್ಮಿಂದ ದೂರ ಆಗಬಾರದು ಎಂದು ನೀವು ಬಯಸಿದರೆ ಈ ಕೆಲವು ಕೆಲಸಗಳನ್ನು ತಪ್ಪದೇ ಮಾಡಿ..

ಜೊತೆಯಾಗಿ ಸಮಯ ಕಳೆಯಿರಿ :- ಒಂದು ಸಂಬಂಧ ಚೆನ್ನಾಗಿರಬೇಕು, ಪ್ರೀತಿಸಿದ ವ್ಯಕ್ತಿಗಳು ಸದಾ ಜೊತೆಯಾಗಿ ಇರಬೇಕು ಎಂದರೆ ಮೊದಲಿಗೆ ನೀವಿಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯಬೇಕು. ಜೊತೆಯಾಗಿ ಸಮಯ ಕಳೆದಷ್ಟು ನಿಮ್ಮಿಬ್ಬರ ಬಾಂಧವ್ಯ ಹೆಚ್ಚಾಗುತ್ತದೆ. ಸಂಗಾತಿಗೆ ಸಮಯ ಕೊಡುವುದು ಬಹಳ ಮುಖ್ಯವಾಗುತ್ತದೆ. ಆಗಾಗ ಲಾಂಗ್ ಡ್ರೈವ್ ಹೋಗುವುದು, ಟ್ರಿಪ್ ಗೆ ಹೋಗುವುದು, ಊಟಕ್ಕೆ ಹೊರಗಡೆ ಹೋಗುವುದು ಹೀಗೆ ಜೊತೆಯಾಗಿ ಸಮಯ ಕಳೆಯಿರಿ.

ಪ್ರಶಂಸೆ ನೀಡಿ, ಪ್ರೀತಿ ವ್ಯಕ್ತಪಡಿಸಿ :- ಪ್ರೀತಿಯಲ್ಲಿ ಎಲ್ಲಾ ವಿಷಯಗಳು ಕೂಡ ಹೇಳದೆಯೇ ಅರ್ಥ ಆಗುವುದಿಲ್ಲ, ಕೆಲವು ವಿಷಯಗಳನ್ನು ನೀವು ಸಂಗಾತಿಯ ಜೊತೆಗೆ ವ್ಯಕ್ತಪಡಿಸಿದಾವ ಅವರಿಗು ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯಲ್ಲಿ ನಿಮಗೆ ಇಷ್ಟ ಆಗುವ ಅಂಶವನ್ನು ಅವರಿಗೆ ತಿಳಿಸಿ, ಅಭಿನಂದನೆ ನೀಡಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅದರಿಂದ ಸಂಬಂಧ ಇನ್ನು ಗಟ್ಟಿಯಾಗುತ್ತದೆ. ಅವರು ಹಾಕುವ ಬಟ್ಟೆ ಅಥವಾ ಇನ್ನಿತರ ವಿಚಾರಕ್ಕೆ ಪ್ರಶಂಸೆ ನೀಡಿ.

ಪ್ರೀತಿಯನ್ನು ಜೀವಂತವಾಗಿಡಿ :- ಒಂದು ಪ್ರೀತಿಯ ಸಂಬಂಧದಲ್ಲಿ ನೀವು ನಿಮ್ಮ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತೀರಿ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ಸಂಗಾತಿಗೆ ನೀವು ಸರ್ಪ್ರೈಸ್ ಕೊಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಅವರಿಗೆ ಇಷ್ಟವಾದ ವಸ್ತುವನ್ನು ತಂದುಕೊಡುವುದು, ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಪ್ಲಾನ್ ಮಾಡುವುದು, ಅವರಿಗೆ ಇಷ್ಟ ಆಗುವ ಕಡೆ ಊಟಕ್ಕೆ ಕರೆದುಕೊಂಡು ಹೋಗುವುದು. ಈ ರೀತಿ ಮಾಡಬಹುದು.

ಸ್ವಾತಂತ್ರ್ಯ ಮುಖ್ಯ :- ಪ್ರೀತಿಯಲ್ಲಿ ಕಾಳಜಿ ಇರುವುದರ ಜೊತೆಗೆ ಸ್ವಾತಂತ್ರ್ಯ ಇರುವುದು ತುಂಬಾ ಮುಖ್ಯವಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ಜಗಳ ಆಡುವುದು, ಸಣ್ಣಪುಟ್ಟ ವಿಚಾರಗಳನ್ನು ಕೂಡ ಹಂಚಿಕೊಳ್ಳಲೇಬೇಕು ಎಂದು ಬಯಸುವುದು ಇದೆಲ್ಲವೂ ಕೂಡ ಪ್ರೀತಿಯಲ್ಲಿ ಇಕ್ಕಟ್ಟಿಗೆ ಸಿಕ್ಕಿಸುವಂಥ ಪರಿಸ್ಥಿತಿಯನ್ನು ತಂದೊಡ್ಡಬಹುದು. ಹಾಗಾಗಿ, ಪ್ರೀತಿಯಲ್ಲಿ ಇಬ್ಬರಿಗೂ ಸ್ವಾತಂತ್ರ್ಯ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Leave A Reply

Your email address will not be published.