ODI World Cup: ಇನ್ನೇನು ವಿಶ್ವಕಪ್ ಶುರು ಆಗೋ ವೇಳೆಯಲ್ಲಿ 5 ಪವರ್ ಫುಲ್ ಆಟಗಾರರು ಔಟ್, ಬದಲಿಗೆ ಬಂದ ಆಟಗಾರರು ಇವರೇ

0 24

ಈ ಬಾರಿ ಓಡಿಐ ವರ್ಲ್ಡ್ ಕಪ್ ಪಂದ್ಯಾವಳಿ ಭಾರತದಲ್ಲಿಯೇ ನಡೆಯುತ್ತಿರುವುದು ವಿಶೇಷ ಆಗಿದೆ. ಓಡಿಐ ವರ್ಲ್ಡ್ ಕಪ್ ಪಂದ್ಯಕ್ಕೆ ಬಾಕಿ ಉಳಿರುವುದು ಕೆಲವೇ ಸಮಯ ಮಾತ್ರ. ಆಕ್ಟೊಬರ್ 5ರಿಂದ ಓಡಿಐ ವರ್ಲ್ಡ್ ಕಪ್ ಪಂದ್ಯಗಳು ಭಾರತದಲ್ಲಿ ಶುರುವಾಗುತ್ತಿದೆ. ಎಲ್ಲಾ ತಂಡಗಳು ಕೂಡ ಈ ಪಂದ್ಯಾವಳಿಗಾಗಿ ಕೊನೆಯ ಕ್ಷಣದ ತಯಾರಿ ನಡೆಸುತ್ತಿದ್ದು, ಇತ್ತ ಭಾರತದ ತಂಡ ಹೋಮ್ ಗ್ರೌಂಡ್ ನಲ್ಲಿ ಕಪ್ ಗೆಲ್ಲಬೇಕು ಎಂದು ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ.

12 ವರ್ಷಗಳ ಹಿಂದೆ ಭಾರತ ತಂಡವು ವರ್ಲ್ಡ್ ಕಪ್ ಗೆದ್ದಿತ್ತು, ಅದೇ ಚರಿತ್ರೆಯನ್ನು ಈಗ ಮರುಸೃಷ್ಟಿ ಮಾಡಲು ಸಜ್ಜಾಗುತ್ತಿದೆ ಟೀಮ್ ಇಂಡಿಯಾ. ಈ ತಯಾರಿಗಳ ನಡುವೆ ವರ್ಲ್ಡ್ ಕಪ್ ನಲ್ಲಿ ಭಾಗವಹಿಸುತ್ತಿರುವ 5 ಪ್ರಮುಖ ತಂಡಗಳ 5 ಮುಖ್ಯ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಗಾಯದ ಕಾರಣಕ್ಕೆ ಈ ಆಟಗಾರರು ವಿಶ್ವಕಪ್ ಟೂರ್ನಿ ಇಂದ ದೂರ ಉಳಿದಿದ್ದು, ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.

ಸೌತ್ ಆಫ್ರಿಕಾ ತಂಡದ ಸ್ಟಾರ್ ಬೌಲರ್ ಆಗಿರುವ ಎನ್ರಿಕ್ ನಾರ್ಖಿಯಾ ಅವರು ಈಗ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಎನ್ರಿಕ್ ಅವರು ಸೌತ್ ಆಫ್ರಿಕಾ ತಂಡಕ್ಕೆ ಕ್ರಿಕೆಟರ್ ಆಗಿ ಪಾದಾರ್ಪಣೆ ಮಾಡಿದ್ದು 2019ರಲ್ಲಿ, ಈವರೆಗೂ ಇವರು ಒಟ್ಟು 22 ಓಡಿಐ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಒಟ್ಟು 36 ವಿಕೆಟ್ಸ್ ಪಡೆದುಕೊಂಡಿದ್ದಾರೆ.

ಓಡಿಐ ವಿಶ್ವಕಪ್ ಇಂದ ದೂರ ಇರುವ ಎರಡನೇ ಆಟಗಾರ ವನಿಂದು ಹಸರಂಗ, ಇವರು ಶ್ರೀಲಂಕಾ ತಂಡದ ಖ್ಯಾತ ಬೌಲರ್ ಆಗಿದ್ದಾರೆ. ಸ್ಪಿನ್ ಮಾಸ್ಟರ್ ಎಂದೇ ಇವರನ್ನು ಕರೆಯುತ್ತಾರೆ. ಆರೋಗ್ಯ ಸಮಸ್ಯೆ ಇಂದ ಇವರು ಕೂಡ ಓಡಿಐ ವರ್ಲ್ಡ್ ಕಪ್ ಇಂದ ಹೊರಾಗಿದ್ದು, ಇವರ ಬದಲಾಗಿ ದುನಿತ್ ವೆಳ್ಳಾಲ ಅವರು ಶ್ರೀಲಂಕಾ ತಂಡದ ಪರವಾಗಿ ವರ್ಲ್ಡ್ ಕಪ್ ಗೆ ಆಯ್ಕೆಯಾಗಿದ್ದಾರೆ..

ವಿಶ್ವಕಪ್ ಇಂದ ದೂರ ಉಳಿದಿರುವ ಮೂರನೇ ಆಟಗಾರ ಕಿವೀಸ್ ತಂಡದ ಸ್ಟಾರ್ ಆಟಗಾರ ಮೈಕಲ್ ಬ್ರೇಸ್ ವೆಲ್ ಅವರು, ಇವರ ಕಾಲಿಗೆ ಸಮಸ್ಯೆ ಆಗಿರುವುದರಿಂದ ವಿಶ್ವಕಪ್ ಇಂದ ದೂರವೇ ಉಳಿದಿದ್ದಾರೆ. ವಿಶ್ವಕಪ್ ಇಂದ ದೂರ ಉಳಿದಿರುವ ನಾಲ್ಕನೇ ಆಟಗಾರ ಪಾಕಿಸ್ತಾನ್ ತಂಡ ಸ್ಟಾರ್ ಬೌಲರ್ ನಸೀಮ್ ಶಾ, ಇವರು ಕೂಡ ಕಾಲಿನ ಗಾಯಕ್ಕೆ ತುತ್ತಾಗಿರುವ ಕಾರಣದಿಂದ ವಿಶ್ವಕಪ್ ಇಂದ ದೂರ ಉಳಿದಿದ್ದಾರೆ.

ಓಡಿಐ ವಿಶ್ವಕಪ್ ಇಂದ ಹೊರಬಂದಿರುವ ಐದನೇ ಆಟಗಾರ ಆಸ್ಟ್ರೇಲಿಯಾ ತಂಡಕ್ಕೆ ಸೇರಿದ ಸ್ಪಿನ್ ಬೌಲರ್ ಆಷ್ಟನ್ ಅಗರ್ ಇವರು ಕೂಡ ಅನಾರೋಗ್ಯದಿಂದ ವಿಶ್ವಕಪ್ ಇಂದ ಹೊರಗಿದ್ದಾರೆ. ಪ್ರಮುಖ ಆಟಗಾರರನ್ನೇ ಕಳೆದುಕೊಂಡ ಈ ತಂಡಗಳು ಹೇಗೆ ಪ್ರದರ್ಶನ ನೀಡುತ್ತದೆ ಎಂದು ಕಾದು ನೋಡಬೇಕಿದೆ

Leave A Reply

Your email address will not be published.