Health Tips: ಬೆಳಗ್ಗೆ ಎದ್ದ ತಕ್ಷಣ ಕರಿಬೇವಿನ ಎಲೆ ತಿನ್ನುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ?

0 22

Health Tips: ನಮ್ಮ ಆರೋಗ್ಯ ಕಾಪಾಡಿಕೊಂಡು ಚೆನ್ನಾಗಿರುವುದಕ್ಕೆ ಬೇರೆ ಏನು ಬೇಡ, ನಮ್ಮ ಸುತ್ತ ಇರುವ ಆಹಾರವನ್ನು ಚೆನ್ನಾಗಿ ತಿಂದು, ಒಳ್ಳೆಯ ಲೈಫ್ ಸ್ಟೈಲ್ ಪಾಲಿಸಿಕೊಂಡು ಹೋದರೆ ಸಾಕು, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇದಕ್ಕೆ ಒಂದು ಉದಾಹರಣೆ ಕರಿಬೇವಿನ ಸೊಪ್ಪು, ಇದರ ರುಚಿ ಕಹಿ ಅನ್ನಿಸಿದರು ಸಹ, ಕರಿಬೇವಿನ ಸೊಪ್ಪು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ಸಾಮಾನ್ಯವಾಗಿ ಕರಿಬೇವನ್ನು ಅಡುಗೆ ಮನೆಯಲ್ಲಿ ಅಡುಗೆಗೆ ಹೆಚ್ಚಾಗಿ ಬಳಸುತ್ತೇವೆ. ನಾವು ಮಾಡುವ ಅಡುಗೆಗೆ ಕರಿಬೇವು ಒಳ್ಳೆಯ ಘಮ ಕೊಡುತ್ತದೆ. ಆದರೆ ಇದರ ರುಚಿ ಮಾತ್ರ ಕಹಿ ಇರುತ್ತದೆ. ಆದರೆ ಕರಿಬೇವಿನಲ್ಲಿ ಪೋಷಕಾಂಶ ಹಾಗೂ ಇನ್ನಿತರ ಅಂಶಗಳು ಸಮೃದ್ಧವಾಗಿ ಇರುವ ಕಾರಣ, ಈ ಎಲೆಗಳು ಆರೋಗ್ಯಕ್ಕೆ ಕೂಡ ಒಳ್ಳೆಯದನ್ನೇ ಮಾಡುತ್ತದೆ..ಬೆಳಗ್ಗೆ ಎದ್ದ ಕೂಡಲೇ ಕರಿಬೇವನ್ನು ತಿಂದರೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇವೆ..

ಕರಿಬೇವಿನಲ್ಲಿ ಪೋಷಣೆ ನೀಡುವಂಥ ಕ್ಯಾಲ್ಸಿಯಂ, ಐರನ್, ವಿಟಮಿನ್, ಮೆಗ್ನಿಶಿಯಂ ಈ ಎಲ್ಲಾ ಅಂಶಗಳಿವೆ. ದಿನಾಲೂ ಬೆಳಿಗ್ಗೆ ಎದ್ದ ನಂತರ 4 ರಿಂದ 5 ಕರಿಬೇವಿನ ಎಲೆಗಳನ್ನು ಆಗಿಯುವುದರಿಂದ ಹೆಚ್ಚಿನ ಲಾಭ ಆರೋಗ್ಯಕ್ಕೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕರಿಬೇವಿನ ಎಲೆಯಲ್ಲಿ ವಿಟಮಿನ್ ಎ ಇದೆ, ಇದು ದೃಷ್ಟಿಗೆ ಒಳ್ಳೆಯದು. ದೃಷ್ಟಿಯ ಸಮಸ್ಯೆ ಇದ್ದರೆ, ಕರಿಬೇವು ತಿನ್ನುವುದರಿಂದ ಬಗೆಹರಿಸಿಕೊಳ್ಳಬಹುದು.

ಕರಿಬೇವಿನಂಲಿ ಹೈಪೋಗ್ಲೈಸಿಮಿಕ್ ಅಂಶವಿದೆ. ಇದು ನಿಮ್ಮ ಆರೋಗ್ಯವನ್ನು ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಮಲಬದ್ಧತೆ, ವಾಯು ಇಂಥ ಸಮಸ್ಯೆಗಳಿಗೆ ಕೂಡ ಕರಿಬೇವು ಒಳ್ಳೆಯದು. ಈ ಎಲ್ಲಾ ಪ್ರಯೋಜನ ನೀಡುವ ಕರಿಬೇವನ್ನು ಪ್ರತಿದಿನ ತಪ್ಪದೇ ಸೇವಿಸಿ.

Leave A Reply

Your email address will not be published.